ಕಾಸರಗೋಡು: ಕುಂಬಳೆ ಆರಿಕ್ಕಾಡಿಯಲ್ಲಿ ಅನ್ಯಾಯವಾಗಿ ವಿಧಿಸಲಾದ ಟೋಲ್ ಸಂಗ್ರಹದ ವಿರುದ್ಧ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಜನಪ್ರತಿನಿಧಿಗಳಿಂದ ಪ್ರತಿಭಟನೆಯನ್ನು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರಕ್ಕೂ ವಿಸ್ತರಿಸಲಾಯಿತು.
ಶಾಸಕ ಎನ್.ಎ. ನೆಲ್ಲಿಕುನ್ ಶಾಸಕ ಧರಣಿ ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂ)ಮುಖಂಡ ಕೆ.ಪಿ.ಸತೀಶ್ ಚಂದ್ರನ್, ಐಯುಎಂಎಲ್ ಮುಖಂಡ ಕಲ್ಲತ್ರ ಮಾಹಿನ್ ಹಾಜಿ, ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಎ. ಗೋವಿಂದನ್ ನಾಯರ್, ಅಜೀಜ್ ಮರಿಕೆ, ಶಾಫಿ ಸಂತೋಷ್ ನಗರ, ಮಂಜುನಾಥ ಆಳ್ವ, ಕೆ.ಆರ್. ಜಯಾನಂದ, ಕೈಗಾರಿಕೋದ್ಯಮಿಗಳ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಕೆ. ಅಹ್ಮದ್ ಶರೀಫ್ , ಬ್ಲಾಕ್ ಪಂಚಾಯತ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಧ್ಯಕ್ಷರು, ವ್ಯಾಪಾರಿಗಳು ಉಪಸ್ಥಿತರಿದ್ದರು. ಸಿ.ಎ. ಸುಬೈರ್ ಸ್ವಾಗತಿಸಿದರು.

