ಕಾಸರಗೋಡು: ಖಾಸಗಿ ಬಸ್ ನಿರ್ವಾಹಕರೊಬ್ಬರ ಕೈ ಹಿಡಿದು ತಿರುಚಿದ ಪರಿಣಾಮ ಕೈಬೆರಳಿನ ಮೂಳೆ ಮುರಿತಕ್ಕೆ ಕಾರಣವಾಗಿರುವ ಬಗ್ಗೆ ಮೂವರು ವಿದ್ಯಾರ್ಥಿಗಳ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುತ್ತಿಕ್ಕೋಲ್-ಕಾಸರಗೋಡು ರೂಟಲ್ಲಿ ಸಂಚರಿಸುವ ಖಾಸಗಿ ಬಸ್ ನಿರ್ವಾಹಕ, ಪರಪ್ಪ ನಿವಾಸಿ ಅನೀಶ್ ಎ.ಎಸ್ ಅವರ ದೂರಿನ ಮೇರೆಗೆ ಮೂರು ಮಂದಿ ಹೈಯರ್ ಸೆಕೆಂರಿ ಶಾಲಾ ವಿದ್ಯಾರ್ಥಿಗಳ ವಿರುದ್ಧ ಈ ಕೇಸು ದಾಖಲಾಗಿದೆ. ಕುತ್ತಿಕ್ಕೋಲಿನಿಂದ ಕಾಸರಗೋಡಿಗೆ ಜ.16ರಂದು ಸಂಜೆ ಬಸ್ ಆಗಮಿಸುತ್ತಿದ್ದಾಗ ವಿದ್ಯಾನಗರದಲ್ಲಿ ಬಸ್ ನಿಲುಗಡೆ ವಿಚಾರದಲ್ಲಿ ಈ ವಿದ್ಯಾರ್ಥಿಗಳು ವಾಗ್ವಾದ ನಡೆಸಿ, ತನ್ನ ಕೈಹಿಡಿದು ತಿರುಚಿದ ಪರಿಣಾಮ ಬೆಳಿನ ಮೂಳೆ ಮುರಿತವುಂಟಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

