ಉಪ್ಪಳ: ಬಾಯಾರಿನಲ್ಲಿ ಇನ್ನೊವಾ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು, ಸನಿಹದ ಗ್ಯಾರೇಜಿನಲ್ಲಿ ನಿಲ್ಲಿಸಲಾಗಿದ್ದ ಆಟೋರಿಕ್ಷಾಗಳಿಗೆ ಹಾಗೂ ಸನಿಹ ನಿಂತಿದ್ದ ವ್ಯಕ್ತಿಗೆ ಡಿಕ್ಕಿಯಾಗಿ ನಿಂತಿದೆ. ಗ್ಯಾರೇಜಿನಲ್ಲಿ ತಮ್ಮ ಆಟೋರಿಕ್ಷಾ ದುರಸ್ತಿಗಾಗಿ ನಿಲ್ಲಿಸಿದ್ದ ಸಂದರ್ಭ ವಾಹನ ಡಿಕ್ಕಿಯಾಗಿದ್ದು, ಆಟೋ ಚಾಲಕ ರವಿ ಎಂಬವರು ಗಾಯಗೊಂಡಿದ್ದಾರೆ. ಇವರನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಣಿ ಅಪಘಾತದಿಂದ ಐದು ಆಟೋರಿಕ್ಷಾಗಳಿಗೆ ಹಾನಿಯುಂಟಾಗಿದೆ. ಬಾಯಾರು ನಿವಾಸಿ ಸತ್ಯನಾರಾಯಣ ಎಂಬವರ ಮಾಲಿಕತ್ವದ ಗ್ಯಾರೇಜಿನಲ್ಲಿ ಈ ಅಪಘಾತ ನಡೆದಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

