ಮಂಜೇಶ್ವರ: ವರ್ಕಾಡಿ ಕೊಂಡೆವೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಐತ್ತಪ್ಪ ಶೆಟ್ಟಿ ದೇವಂದಪಡ್ಪು ಅಧ್ಯಕ್ಷತೆವಹಿಸಿದ್ದರು.
ಕ್ಷೇತ್ರದ ಅರ್ಚಕರು ಪ್ರಾರ್ಥಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ, ಸಮಿತಿಯ ಗೌರವ ಸಲಹೆಗಾರ ಚಂದ್ರಹಾಸ ಪೂಜಾರಿ ಮುಡಿಮಾರು, ಕ್ಷೇತ್ರದ ಮೊಕ್ತೇಸರರಾದ ಅರುಣ್ ಕುಮಾರ್ ಶೆಟ್ಟಿ ಪೆರ್ಮನಂಜಿ, ಪದ್ಮನಾಭ ಅಡ್ಯಂತಾಯ ಕಾಪು, ಜಯಪ್ರಕಾಶ್ ಆಡ್ಯಂತಾಯ ಕಾಪು, ರವಿ ಮುಡಿಮಾರು, ದಯಾನಂದ ಕರ್ಕೆರ ಮುಡಿಮಾರು, ಸಮಿತಿ ಸದಸ್ಯರಾದ ಮಾಧವ ಪೂಜಾರಿ ಕುದುಕೋರಿ, ನವೀನ್ ಮುಡಿಮಾರು, ವಿಶ್ವನಾಥ ಶೆಟ್ಟಿ ಕೋರಿಮುಗೇರ್, ಯಶ್ವಿತ್ ಮುಡಿಮಾರ್, ವಾಮನ ಮುಡಿಮಾರು, ಚಂದ್ರಶೇಖರ ಪೆರ್ಮನಂಜಿ, ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವರ್ಕಾಡಿ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಜ. 24ರಂದು ಜಾತ್ರಾ ಮಹೋತ್ಸವ ನಡೆಯಲಿರುವುದು. ಅಂದು ಬೆಳಿಗ್ಗೆ ಉಷಾ ಪೂಜೆ, ಸಾಮೂಹಿಕ ಪ್ರಾರ್ಥನೆ, ಗಣ ಹೋಮ, ನವಕ ಪ್ರಧಾನ ಹೋಮ, ನಾಗದೇವರಿಗೆ ತಂಬಿಲ, ಮಹಾಪೂಜೆ, ಅನ್ನ ಸಂತರ್ಪಣೆಯು ನಡೆಯುವುದು. ಸಂಜೆ 5ಕ್ಕೆ ಭಜನಾ ಸಂಕೀರ್ತನೆ ನಡೆದು ದೀಪಾರಾಧನೆ ,ರಂಗ ಪೂಜೆ, ಭೂತ ಬಳಿ ಉತ್ಸವ, ರಾಜಾಂಗಣ ಪ್ರಸಾದ ,ನಂತರ ಅನ್ನಸಂತರ್ಪಣೆಯು ನಡೆಯುವುದು, ರಾತ್ರಿ ಗಂಟೆ 9:30ರಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಳಿಕೆ ಎರುಂಬು ದಿವ್ಯಜ್ಯೋತಿ ಕಲಾವಿದರಿಂದ ತುಳು ಹಾಸ್ಯಮಯ ನಾಟಕ "ಮದಿಮೆದ ಇಲ್ಲಡ್ " ಪ್ರದರ್ಶನ ಗೊಳ್ಳಲಿದೆ.


