ಕಾಸರಗೋಡು: ಅಂಚೆ ಕಚೇರಿಗಳನ್ನು ಮುಚ್ಚುಗಡೆಗೊಳಿಸಿರುವ ಕ್ರಮ ವಿರೋಧಿಸಿ ತಳಂಗರೆ ಅಂಚೆ ಕಚೇರಿ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಮುಖ್ಯ ಅಂಚೆ ಕಚೇರಿ ವಠಾರದಲ್ಲಿ ಹಗಲು-ರಾತ್ರಿ ಸತ್ಯಾಗ್ರಹ ಸರಣಿಯನ್ನು ಪ್ರಾರಂಭಿಸಲಾಯಿತು.
ಶಾಸಕ ಎನ್.ಎ. ನೆಲ್ಲಿಕುನ್ನು ಧರಣಿ ಉದ್ಘಾಟಿಸಿದರು. ಅನಿವಾಸಿ ಉದ್ಯಮಿ ಯಾಹ್ಯಾ ತಳಂಗರೆ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ನಗರಸಭೆ ಉಪಾಧ್ಯಕ್ಷ ಕೆ.ಎಂ.ಹನೀಫ, ಕೆ. ಎಂ. ಬಶೀರ್, ಕೆ ಎಂ ಅಬ್ದುಲ್ ರಹಮಾನ್, ಎ. ಅಬ್ದುಲ್ ರಹಮಾನ್, ಜಹೀರ್, ಆಸಿಫ್, ರಹಮಾನ್ ತೋಟನ್, ಅಮೀರ್ ಪಳ್ಳಿಯಾನ್, ಅರ್ಷಿದಾ ಜುಬೇರ್, ಜಾಹಿದಾ ಯೂಸುಫ್, ಯೂನಸ್ ಬಾಂಗೋಡು, ಜಾಫರ್ ಕಮಾಲ್ ಪಿ.ಎಂ. ಅಬ್ದುಲ್ ರಹಮಾನ್, ಹಬೀಬ್ ಕೆ.ಕೆಪುರಂ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಹೋರಾಟ ಸಮಿತಿ ಸಂಚಾಲಕ ಸಿದ್ದಿಕ್ ಚಕ್ಕರ ಸ್ವಾಗತಿಸಿದರು.

