ಜೈಪುರ: ಅಜ್ಮೀರ್ ದರ್ಗಾ ಮೊದಲು ಶಿವ ದೇಗುಲವಾಗಿತ್ತು, ಆ ಸ್ಥಳದಲ್ಲಿ ಪುರಾತತ್ವ ಸಮೀಕ್ಷೆಯಾಗಬೇಕು ಎಂದು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಅರ್ಜಿಯೊಂದು ಸಲ್ಲಿಕೆಯಾಗಿದೆ.
'ಈ ಬಗ್ಗೆ ನಾನು ಹಲವು ಸಮಯಗಳಿಂದ ಹೋರಾಡುತ್ತಿದ್ದೇನೆ. ರಾಷ್ಟ್ರಪತಿಯವರಿಗೂ ಈ ಕುರಿತು ಅರ್ಜಿ ನೀಡಿದ್ದೆ.
ಅದನ್ನು ಅವರು ರಾಜಸ್ಥಾನ ಮುಖ್ಯ ಕಾರ್ಯದರ್ಶಿಗೆ ರವಾನಿಸಿದ್ದರು' ಎಂದು ಮಹಾರಾಣಾಪ್ರತಾಪ್ ಸೇನಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಹೇಳಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸುವಂತೆ ಕೋರಿ ಅಜ್ಮೀರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಹಿರಿಯ ವಕೀಲ ಎ.ಪಿ ಸಿಂಗ್ ತಿಳಿಸಿದ್ದಾರೆ.
2024ರಲ್ಲಿಯೂ ಹಿಂದೂ ಪರ ಸಂಘಟನೆಯ ನಾಯಕರೊಬ್ಬರು ಇದೇ ರೀತಿಯ ಅರ್ಜಿ ಸಲ್ಲಿಸಿದ್ದರು.

