ಪೆರ್ಲ: ಬಜಕೂಡ್ಲಿನಲ್ಲಿರುವ ಮರಾಟಿ ಬೋರ್ಡಿಂಗ್ ಹಾಲ್ ನಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಬೋರ್ಡಿಂಗ್ ಹಾಲ್ ನ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು.
ಸಂಘದ ಅಧ್ಯಕ್ಷೆ ಪುಷ್ಪಾ ಅಮೆಕ್ಕಳ ಧ್ವಜಾರೋಹಣ ನೆರವೇರಿಸಿದರು. ಮಾಜಿ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಬಾರಿಕ್ಕಾಡು ಗಣರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು. ರಾಷ್ಟ್ರಗೀತೆ ಪ್ರತಿಜ್ಞೆ ಹಾಗೂ ಧ್ವಜವಂದನೆ ನಡೆಸಲಾಯಿತು. ಮಹಿಳಾ ಸಮಿತಿ ಸದಸ್ಯೆ ನಳಿನಿ ಪಳ್ಳಕಾನ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಪುರಂದರ ಮಾಸ್ತರ್ ಸ್ವಾಗತಿಸಿದರು.

.jpg)
