ಕಾಸರಗೋಡು: ರೈತ-ವಿಜ್ಞಾನಿ-ಪರಿಸರ ಬಳಗ 'ಬಯಲು ಮನೆ' ವತಿಯಿಂದ ಕೊಡಮಾಡುವ ಹಸಿರು ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ಉದುಮ ಕೊಡೋತ್ ವಳಪ್ಪಿಲ್‍ನ ಕುಞÂಕಣ್ಣನ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಂಘಟನೆ ಪದಾಧಿಕಾರಿ ಕನ್ನಾಲಯಂ ನಾರಾಯಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಸಿರು ಪ್ರಶಸ್ತಿಯು 10ಸಾವಿರ ರಊ. ನಗದು ಮತ್ತು ಪ್ರಶಸ್ತಿಫಲಕ ಒಳಗೊಂಡಿದೆ. ಕುಞÂಕಣ್ಣನ್ ಅವರ ಕೃಷಿ ಕ್ಷೇತ್ರದಲ್ಲಿನ ಸಕ್ರಿಯತೆ, ಪರಿಸರ ಮತ್ತು ಬಿಎಂಸಿಯಲ್ಲಿ ನಡೆಸಿರುವ ಪ್ರಶಂಸನೀಯ ಕಾರ್ಯಗಳನ್ನು ಪರಿಗಣಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜನವರಿ 18 ರಂದು ಬೆಳಿಗ್ಗೆ 10.30ಕ್ಕೆ ಉದುಮ ಮಾಂಗಾಟ್‍ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು. ಕಣ್ಣೂರು-ಕಾಸರಗೋಡು ಅಪರಾಧ ವಿಭಾಗದ ಎಸ್‍ಪಿ ಪಿ. ಬಾಲಕೃಷ್ಣನ್ ನಾಯರ್ ಸಮರಂಭ ಉದ್ಘಾಟಿಸುವರು. ಕನ್ನಾವರಾಯ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಗವಾಸ್ ರಾಕೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ವಿ. ರಾಜೇಂದ್ರನ್, ಡಿವೈಎಸ್ಪಿ ಬಾಬು ಪೆರಿಂಗೋತ್, ರವೀಂದ್ರನ್ ಕೊಡಕ್ಕಾಡ್, ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಎನ್.ನಾಯರ್, ಎ.ಕೆ. ಜಯಪ್ರಕಾಶ್, ಡಾ.ಸಂತೋಷ್ ಕುಮಾರ್ ಕುಕ್ಕಲ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇ.ಜನಾರ್ದನನ್ ಪಾನೂರು, ಎ.ಬಾಲಕೃಷ್ಣನ್ ಅಳಕೋಡ್, ರಾಧಾಕೃಷ್ಣನ್ ಮಾಂಗಾಡ್, ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಕೆ.ಚಂದ್ರನ್ ಉಪಸ್ಥಿತರಿದ್ದರು.


