ಕಾಸರಗೋಡು: ಸಹಕಾರಿ ಸಂಸ್ಥೆಯಿಂದ ನಿವೃತ್ತಿ ಹೊಂದಿದ ನೌಕರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸೆಕ್ರೆಟರಿಯಟ್ ಮುಂಬಾಗದಲ್ಲಿ ನಡೆಯಲಿರುವ ಸತ್ಯಾಗ್ರಹ ಮತ್ತು ನಿರಾಹಾರ ಸತ್ಯಾಗ್ರಹಕ್ಕೆ ಪೂರ್ವಭಾವಿಯಾಗಿ ಜನವರಿ 29ಕ್ಕೆ ಮಂಜೇಶ್ವರದಿಂದ ಆರಂಭವಾಗಲಿರುವ ವಾಹನ ಪ್ರಚಾರ ಜಾಥ ವಿಜಯಗೊಳಿಸಲು ಸಹಕಾರಿ ಪೆನ್ಷನರ್ಸ್ ಅಸೋಸಿಯೇಷನ್ ಕಾಸರಗೋಡು ಯೂನಿಟ್ ಸಭೆ ತೀರ್ಮನ ಕೈಗೊಂಡಿತು.
ಯೂನಿಟ್ ಸಭೆಯನ್ನು ರಾಜ್ಯ ಸಮಿತಿ ಸದಸ್ಯ ಕುಞÂರಾಮನ್ ನಾಯರ್ ಉದ್ಘಾಟಿಸಿದರು. ಅಂಬಾಡಿ ಅಧ್ಯಕ್ಷತೆ ವಹಿಸಿದರು. ಎ .ರವೀಂದ್ರನ್, ಯಂ.ಅಶೋಕ ರೈ,ನಾರಾಯಣಿ ಕುಟ್ಟಿ,ಸುಸಮ್ಮ ಗೋಪಿ ಉಪಸ್ಥಿತರಿದ್ದರು. ಎ ಸುಬ್ಬಣ್ಣ ರೈ ಸ್ವಾಗತಿಸಿದರು. ಅನಿಲ್ ಕುಮಾರ್ ಕೆ ವಂದಿಸಿದರು. 29ರಂದು ಬೆಳಿಗ್ಗೆ 11ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಸಮೀಪ ನಡೆಯುವ ಸಭೆಯಲ್ಲಿ ಸಂಘಟನೆ ರಾಜ್ಯ ನೇತಾರರು ಭಾಗವಹಿಸುವರು.

