ಕಾಸರಗೋಡು: ಕೇಂದ್ರ ಸರ್ಕಾರದ ಕಾನೂನಿನ ಹೆಸರಿನಲ್ಲಿ ಆಟೋ ವಾಹನಗಳ ಫಿಟ್‍ನೆಸ್ ಶುಲ್ಕವನ್ನು ಹತ್ತು ಪಟ್ಟು ಹೆಚ್ಚಿಸಿರುವ ಪಿಣರಾಯಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಕಾಸರಗೋಡು ಆಟೋರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆರ್ ಟಿ ಒ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಆಟೋ ರಿಕ್ಷಾ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೋಟೆಕಣಿ ಧರಣಿ ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು, ಬಿಎಂಎಸ್ ಜಿಲ್ಲಾ ಪದಾಧಿಕಾರಿಗಳಾದ ದಿನೇಶ್ ಬಂಬ್ರಾಣ, ಹರೀಶ್ ಕುದುರೆಪಾಡಿ, ಗುರುದಾಸ್ ಚೇನಕ್ಕೋಡು, ಎ ಕೇಶವ, ಉಮೇಶ್ ಎಸ್ ಕೆ, ವಿಶ್ವನಾಥ ಶೆಟ್ಟಿ, ರಾಜೇಶ್ ಕಾಞಂಗಾಡ್, ಬಿ ಎಂ ಎಸ್ ಕಾಸರಗೋಡು, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಮೊದಲಾದವರು ಭಾಗವಹಿಸಿದ್ದರು.
15 ವರ್ಷಗಳಿಂದ ಜಾರಿಯಲ್ಲಿರುವ ಆಟೋರಿಕ್ಷಾಗಳ ಫಿಟ್‍ನೆಸ್ ಶುಲ್ಕವನ್ನು ಹೆಚ್ಚಿಸುವ ಸರ್ಕಾರದ ಕಾರ್ಮಿಕ ವಿರೋಧಿ ಕ್ರಮ ಕೈಬಿಡುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ಆಟೋರಿಕ್ಷಾ ಮಜ್ದೂರ್ ಸಂಘದ ಜಿಲ್ಲಾ ಕಾರ್ಯದರ್ಶಿ ಭರತನ್ ಕಲ್ಯಾಣ್ ರೋಡ್ ಸ್ವಾಗತಿಸಿದರು. ಸದಾಶಿವ ಮುಳ್ಳೇರಿಯಾ ವಂದಿಸಿದರು.

