ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೊಡು ಪೆರಿಯ ಕ್ಯಾಂಪಸ್‍ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಮತ್ತು ದೈಹಿಕ ಶಿಕ್ಷಣ ತಂಡದ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.
ಈ ಸಂದರ್ಭ ಸ್ವದೇಶಿಗಾಗಿ ಓಟ"ವಿವೇಕಾನಂದ" ಎಂಬ ಘೋಷಣೆಯೊಂದಿಗೆ ಕ್ರಾಸ್ ಕಂಟ್ರಿ ಚಾಂಪಿಯನ್‍ಶಿಪ್ ಮತ್ತು ಪೆÇೀಸ್ಟರ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಮತ್ತು "ವಿವೇಕಾನಂದ" ಎಂಬ ಪದವನ್ನು ಕ್ಯಾಂಪಸ್‍ನಲ್ಲಿರುವ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಪ್ರಭಾರ ಕುಲಸಚಿವ ಡಾ. ಆರ್. ಜಯಪ್ರಕಾಶ್ ಸಮಾರಂಭ ಉದ್ಘಾಟಿಸಿದರು. ಡೀನ್ ಅಕಾಡೆಮಿಕ್ ಪೆÇ್ರ. ಜೋಸೆಫ್ ಕೊಯಿಪಲ್ಲಿ, ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ, ಡಾ. ಸಿ.ಎ. ಗೀತಾ, ಡಾ. ಎಚ್.ಪಿ. ಗುರುಶಂಕರ, ಡಾ. ಸುಜಿತ್ ಕೆ.ವಿ. ಮತ್ತು ಡಾ. ವಿನೇಶ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ. ಎಸ್. ಅನ್ಬಳಗಿ, ಡಾ. ಎ. ಸದಾನಂದಂ, ಡಾ. ಸುಬ್ರಹ್ಮಣ್ಯ ಪೈಲೂರು, ಡಾ. ಕೆ. ಅಲಿ ಅಕ್ಬರ್ ಮತ್ತು ಇತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.


