ಪೆರ್ಲ: ಮನೆಯವರು ವಿವಾಹ ಸಮಾರಂಭಕ್ಕೆ ತೆರಳಿ ವಾಪಸಾಗುವ ಆರು ತಾಸುಗಳೊಳಗೆ ಮನೆ ಬೀಗ ಒಡೆದು ನಗ, ನಗದು ದೋಚಿದ ಪ್ರಕರಣ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮಣಿಯಂಪಾರೆಯಲ್ಲಿ ನಡೆದಿದೆ.
ಶೇಣಿ ಮಣಿಯಂಪಾರೆ ಹೌಸ್‍ನ ಮಹಮ್ಮದ್ ಮೂಸಾನ್ ಎಂಬವರ ಮನೆಯಿಂದ ಈ ಕಳವು ನಡೆದಿದೆ. ಮಹಮ್ಮದ್ ಮೂಸಾನ್ ಕುಟುಂಬ ಜ. 12ರಂದು ಮಧ್ಯಾಹ್ನ ಸಂಬಂಧಿಕರೊಬ್ಬರ ವಿವಾಹ ಸಮಾರಂಭಕ್ಕೆ ತೆರಳಿದ್ದು, ರಾತ್ರಿ 8.30ರೊಳಗೆ ಮನೆಗೆ ತಲುಪಿದಾಗ ಕಳವು ಬೆಳಕಿಗೆ ಬಂದಿದೆ. ಮನೆ ಬೀಗ ಒಡೆದು ಕಪಾಟಿನಲ್ಲಿರಿಸಿದ್ದ250ಯುಎಇ ದಿರ್‍ಹಾಂ, 4ಸಾವಿರ ರೂ.ನಗದು ಹಾಗೂ ಅಲ್ಪ ಚಿನ್ನಾಭರಣ ಕಳವುಗೈದಿರುವ ಬಗ್ಗೆ ನೀಡಿದ ದೂರಿನನ್ವಯ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿವಾಹಕ್ಕೆ ತೆರಳುವ ವೇಳೆ ಹೆಚ್ಚಿನ ಚಿನ್ನಾಭರಣ ಧರಿಸಿಕೊಂಡು ತೆರಳಿರುವುದರಿಂದ ಚಿನ್ನಾಭರಣ ನಷ್ಟ ಕಡಿಮೆಯಾಗಿದೆ.

