ಉಪ್ಪಳ: ತ್ರಿಸ್ತರ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದವರಿಗೆ ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಬಂದ್ಯೋಡು ಸಮುದಾಯ ಭವನದಲ್ಲಿ ಜರಗಿತು. ದೇವಸ್ವಂ ಬೋರ್ಡ್ ಸದಸ್ಯ ಎ ಕೆ ಶಂಕರ ಆದೂರ್ ಉದ್ಘಾಟಿಸಿದರು. ಬದಿಯಡ್ಕ ಪಂಚಾಯಿತಿ ಅಧ್ಯಕ್ಷ ಡಿ ಶಂಕರ, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕೊಡು, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ನಾಗೇಶ್ ಮಂಜೇಶ್ವರ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಕಾಸರಗೋಡು ಅಗ್ನಿಶಾಮಕದಳ ಸಿಬ್ಬಂದಿ ಹರ್ಷ ಕನಿಯಾಲ ಹಾಗೂ ಇತರ ಪಂಚಾಯಿತಿ ಸದಸ್ಯರಾದ ಚೈತ್ರ ಬಸ್ತಿ, ಕೊರಗಪ್ಪ ಬೆಳ್ಳಿಗೆ, ಹರೀಶ್ ಕಿಳಿಂಗಾರ್, ಪ್ರಜ್ಞಾ ಮುಳಿಪರಂಬ, ಕೇಶವ ಪುತ್ತಿಗೆ, ರಮೇಶ್ ಮುದಲಪಾರ, ಕೃಷ್ಣಪ್ಪ ಬಜಕ್ಕೂಡ್ಲು, ನಾರಾಯಣ ವರ್ಕಾಡಿ, ಚಂದ್ರ ಪೆರಿಯಡ್ಕ ಇವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.
ನಿಟ್ಟೋಣಿ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ರವಿ ಕನಕಪ್ಪಾಡಿ, ನಾರಾಯಣ ಬಾರಡ್ಕ, ಆನಂದ ಬಂದ್ಯೋಡು, ಹರಿಶ್ಚಂದ್ರ ಪುತ್ತಿಗೆ, ಪದ್ಮನಾಭ ಚೇನೆಕ್ಕೋಡು, ಸುರೇಶ್ ಅಜಕ್ಕೋಡು, ರಾಮ ಪಟ್ಟಾಜೆ, ಸುಂದರ ಬಾರಡ್ಕ, ರಾಜೇಶ್ ಕಾರೆಮೂಲೆ, ಗುರು ಚೇನೆಕ್ಕೋಡು, ಗೌತಮ್ ಬಂದ್ಯೋಡ್, ಜಯಾ ರಾಮಪ್ಪ, ಉಮೇಶ್ ಬಂದ್ಯೋಡ್, ಗಿರಿಜಾ, ದೇವಕಿ, ಪುಷ್ಪ, ಬಾಬು, ಶಂಕರ ಹೊಸಂಗಡಿ, ಗೋಪಾಲ ದರ್ಬೆತಡ್ಕ, ವಿನಯ ಕುಮಾರಿ ಅಭಿನಂದನಾ ಭಾಷಣ ಮಾಡಿದರು. ಸಂಘಟನಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ಸ್ವಾಗತಿಸಿ, ಗೌತಮ್ ಬಂದ್ಯೋಡು ವಂದಿಸಿದರು. ಸುಂದರ ಸುದೆಂಬಳ ನಿರೂಪಿಸಿದರು.

.jpg)
