ಬದಿಯಡ್ಕ: ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ನೇತೃತ್ವದಲ್ಲಿ ದ.ಕ ಜಿಲ್ಲೆಯ ನೇತ್ರಾವತಿ ವಲಯದ ಆಧೀನದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಸ್ಕೂಲಿನಲ್ಲಿ ಗಣರಾಜ್ಯೋತ್ಸವದಂದು ಮಾತೃಧ್ಯಾನ, ಮಾತೃಭೋಜನ, ಮಾತೃವಂದನ ಕಾರ್ಯಕ್ರಮ ಜರುಗಿತು.
ನೀರ್ಚಾಲು ಪ್ರೌಡಶಾಲೆಯ ವೇದಿಕೆಯಲ್ಲಿ ಅಪರಾಹ್ನ ನಡೆದ ಸಮಾರಂಭದಲ್ಲಿ ಸ್ನೇಹಲತಾ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜ್ ಹೈಸ್ಕೂಲಿನ ನಿವೃತ್ತ ಅಧ್ಯಾಪಕಿ ವಾಣಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಕ್ಷೇಮ ಅಭಿವೃದ್ಧಿ ಅಧಿಕಾರಿ,ಉಳ್ಳಾಲ ನಗರ ಸಹ ಸಂಚಾಲಕಿ ಜ್ಯೋತಿ ಅವರು ಆಟೋಟ, ಮಾತೃಧ್ಯಾನ, ಮಾತೃವಂದನ ಕಾರ್ಯಕ್ರಮ ನಡೆಸಿಕೊಟ್ಟರು. ಸಾವಿತ್ರಿ ಸ್ವಾಗತಿಸಿ, ದಿವ್ಯಶ್ರೀ ಪ್ರಾರ್ಥನೆ ಹಾಡಿದರು. ಗಾಯತ್ರಿ ವರದಿ ಮಂಡಿಸಿದರು. ವತ್ಸಲಾ ಪ್ರಾರ್ಥನೆ ಹಾಡಿದರು. ಕಾವ್ಯಶ್ರೀ ವಂದಿಸಿದರು. ಮಾಲತಿ ನಿರೂಪಿಸಿದರು. ನೇತ್ರಾವತಿ ವಲಯ ಸಂಚಾಲಕ ಜಯರಾಮ, ಕಾಸರಗೋಡು ನಗರ ಶಿಕ್ಷಣ ಪ್ರಮುಖ ಕುಮಾರ ಸುಬ್ರಹ್ಮಣ್ಯ, ಸದ್ಯೋಜಾತ, ಶೈಲೇಶ, ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು.

.jpg)
.jpg)
.jpg)
