ಉಪ್ಪಳ : ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧೀನದಲ್ಲಿ ಇ.ಇ.ಪಿ. (ಎನ್ವೈರನ್ಮೆಂಟ್ ಎಜುಕೇಶನ್ ಪೆÇ್ರೀಗ್ರಾಂ) ಎಂಬ ಹೆಸರಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ಗಳು ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಯ ಹಸಿರು ಸೇನೆಯ ಆಧೀನದಲ್ಲಿರುವ ಈ ಕ್ಲಬ್ ಸದಸ್ಯರಿಗಾಗಿ ಪ್ರಕೃತಿ ಶಿಬಿರಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರಗಳು, ಪರಿಸರ ಅಧ್ಯಯನ ಯೋಜನೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾ ಹಾಗೂ ಉಪಜಿಲ್ಲಾ ಮಟ್ಟಗಳಲ್ಲಿ ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ಇತ್ತೀಚೆಗೆ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲೆಯ ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ಸುಸ್ಥಿರ ಅಭಿವೃದ್ಧಿಯನ್ನು ಲಕ್ಷವಾಗಿರಿಸಿ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ರಹ್ಮಾನ್ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯೆ ನಸೀಯ ಅಸೀಸ್ ಮಾತನಾಡಿದರು.
ಮಕ್ಕಳಲ್ಲಿ ವೈಜ್ಞಾನಿಕ ಅರಿವು ಬೆಳೆಸುವ ಉದ್ದೇಶದಿಂದ ನಡೆದ ಮೊದಲ ವಿಚಾರ ಸಂಕಿರಣದಲ್ಲಿ ನಿವೃತ್ತ ರಸಾಯನಶಾಸ್ತ್ರ ಶಿಕ್ಷಕಿ, ದೀರ್ಘಕಾಲ ರಾಜ್ಯಮಟ್ಟದ ರಸಾಯನಶಾಸ್ತ್ರ ಸಂಪನ್ಮೂಲ ಸದಸ್ಯೆ ಹಾಗೂ ಉಪಜಿಲ್ಲಾ ಸೈನ್ಸ್ ಕ್ಲಬ್ ಕಾರ್ಯದರ್ಶಿ ಮಾಧುರಿ ಕೆ.ಎನ್ ಅವರು ನಡೆಸಿಕೊಟ್ಟರು. ನಂತರ ಪಡನ್ನಕಾಡ್ ಕೃಷಿ ಕಾಲೇಜಿನಲ್ಲಿ ನಿವೃತ್ತ ಲೇಬರ್ ಶಿಕ್ಷಕ ಅಶೋಕನ್ ಅವರು ಬಡ್ಡಿಂಗ್, ಗ್ರಾಫ್ಟಿಂಗ್, ಲೇಯರಿಂಗ್ ಮುಂತಾದ ವಿಧಾನಗಳಲ್ಲಿ ಮಕ್ಕಳಿಗೆ ಪ್ರಾಯೋಗಿಕ ತರಬೇತಿ ನೀಡಿದರು. ತರಗತಿಗಳ ಕನ್ನಡ ಅನುವಾದವನ್ನು ಕುಳೂರು ಜಿ.ಎಲ್.ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮಾಲತಿ ಹಾಗೂ ಜಿ.ಎಚ್.ಎಸ್ ಪೈವಳಿಕೆ ನಗರ ಶಾಲೆಯ ಅಧ್ಯಾಪಕ ಸಂಜೀವ್ ಮತ್ತು ಸಂಪನ್ಮೂಲ ವ್ಯಕ್ತಿಗಳು ನೆರವೇರಿಸಿದರು.
ಪಾಲ್ಗೊಳ್ಳುವಿಕೆ ಹಾಗೂ ಉತ್ತಮ ಅನುಭವಗಳಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕೇರಳದಲ್ಲಿನ ಸಾವಿರದ ಇನ್ನೂರು(1200) ಜೈವವೈವಿಧ್ಯ ಸಂರಕ್ಷಣಾ ಸಮಿತಿಗಳಲ್ಲಿ (ಬಿ.ಎಂ.ಸಿ) 2023ರ ಅತ್ಯುತ್ತಮ ಬಿ.ಎಂ.ಸಿ ಪ್ರಶಸ್ತಿಯನ್ನು ಪಡೆದ ಕಾಸರಗೋಡು ಜಿಲ್ಲಾ ಬಿ.ಎಂ.ಸಿ ಸಂಚಾಲಕ, ರಾಷ್ಟ್ರೀಯ ಹಸಿರು ಸೇನೆಯ ಕಾಸರಗೋಡು ಜಿಲ್ಲಾ ಸಂಯೋಜಕಿ ಹಾಗೂ ನಿವೃತ್ತ ಸಸ್ಯಶಾಸ್ತ್ರ ಶಿಕ್ಷಕಿ ಸುಶ್ಮಿತ ಟಿ.ಎಂ ಸ್ವಾಗತಿಸಿ, ಜಿ.ಎಚ್.ಎಸ್.ಎಸ್. ಮಂಗಲ್ಪಾಡಿಯ ಅಧ್ಯಾಪಕ ದಿನೇಶ್ ವಂದಿಸಿದರು.

.jpg)
