ಪೆರ್ಲ: ಗಣರಾಜ್ಯೋತ್ಸವದ ಆಂಗವಾಗಿ ಹಿರಿಯ ಸಾಹಿತಿ ಹರೀಶ್ ಪೆರ್ಲರ 'ಗುಲಾಬಿ ನಿವಾಸ"ದಲ್ಲಿ "ಭಾರತ್ ಮಾತಾ ಪೂಜನ್ ಕಾರ್ಯಕ್ರಮ ಆಯೋಜಿಸಲಾಯಿತು. ಭಾರತಮಾತೆಯ ಭಾವಚಿತ್ರವನ್ನು ಅಲಂಕರಿಸಿ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸೇವಾ ಭಾರತಿ ಕಾರ್ಯಕರ್ತ ಮುರಳೀಧರ ಯಾದವ್ ನಾಯ್ಕಾಪು ಭಾರತ ಮಾತೆಯ ಹಿರಿಮೆ ಗರಿಮೆ ವಿಷಯದ ಬಗ್ಗೆ ಪ್ರಸ್ತಾಪಿಸಿ ದೇಶದ ಸಂಸ್ಕøತಿ, ಹಾಗೂ ಪುರಾಣ ಗ್ರಂಥಗಳ ಬಗ್ಗೆ ಜಾಗೃತಿ ಮೂಡಿಸಿದರು. "ಮಾತೃ ದೇವೋ ಭವ, ಪಿತೃದೇವೋ ಭವ" ಉಪನಿಷತ್ ವಾಕ್ಯಗಳ ಪ್ರಾಮುಖ್ಯತೆಯನ್ನು ಕತೆಯ ಮೂಲಕ ನಿರೂಪಿಸಿ, ವಿದ್ಯಾರ್ಥಿಗಳು ರೂಢಿಸಬೇಕಾದ ಆಚಾರ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು. ಸವಿ ಹೃದಯ ಕವಿ ಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಭಗವದ್ಗೀತೆಯ ಒಂದನೇ ಅಧ್ಯಾಯದ ಪಾರಾಯಣ, ಭಜನೆ, ದೇಶಭಕ್ತಿ ಗೀತೆ, ವಂದೇಮಾತರಂ, ಶಾಂತಿಮಂತ್ರ ಪಠಿಸಲಾಯಿತು. ಉದ್ಯಮಿ ಪ್ರಸಾದ್ ಟಿ. ಪೆರ್ಲ ಭಾಗವಹಿಸಿದ್ದರು. ವಿಜಯ ಕಾನ ನಿರೂಪಿಸಿದರು.

.jpg)
.jpg)
