ಬದಿಯಡ್ಕ: ಇತಿಹಾಸ ಪ್ರಸಿದ್ಧ ಎಡನೀರು ಶ್ರೀ ವಿಷ್ಣುಮಂಗಲ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರವರಿ 12ರಿಂದ 16 ರವರೆಗೆ ಎಡನೀರು ಶ್ರೀ ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ಅವರ ನೇತೃತ್ವ ಹಾಗೂ ಬ್ರಹ್ಮಶ್ರೀ ಉಚ್ಚಿಲತಾಯ ಶ್ರೀ ಪದ್ಮನಾಭ ತಂತ್ರಿಯವರ ತಾಂತ್ರಿಕ ವಿಧಿ ವಿಧಾನಗಳಿಂದ ವಿವಿಧ ದೈವಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಉತ್ಸವವನ್ನು ಯಶಸ್ವಿಗೊಳಿಸುವನಿಟ್ಟಿನಲ್ಲಿ ಊರ ಪರವೂರ ಭಕ್ತಾದಿಗಳ ಸಭೆ ಶ್ರೀಮಠದಲ್ಲಿ ಜರುಗಿತು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು ಸಮಾರಂಭ ಉದ್ಘಾಟಿಸಿದರು. ಸೇವಾ ಸಮಿತಿ ಅಧ್ಯಕ್ಷ ಕೆ. ಸೂರ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಕುಮಾರಿ ಟೀಚರ್, ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಕೆ. ಮಾಧವ ಹೇರಳ, ವಿಷ್ಣುಮೂರ್ತಿ ಕಕ್ಕಿಲ್ಲಾಯ, ಇ. ವೇಣುಗೋಪಾಲ ಮಾಸ್ಟರ್, ಕುಂಞÂರಾಮನ್ ಮೊದಲಾದವರು ಉಪಸ್ಥೀತರಿದ್ದರು. ಗೋಪಾಲ ಮಾಸ್ಟರ್ ಲೆಕ್ಕಪತ್ರ ಮಂಡಿಸಿದರು. ಶಕುಂತಲಾ ರಾಮಕೃಷ್ಣ ಕೆದಿಲಾಯ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಉಮೇಶ್ ನರಿಕಡಪು ಸ್ವಾಗತಿಸಿದರು. ಸಮಿತಿ ಜೊತೆ ಕಾರ್ಯದರ್ಶಿ ಮಧು ಕೆಮ್ಮಂಗಯ ವಂದಿಸಿದರು. ಈ ಸಂದರ್ಭ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.


