ಕಾಸರಗೋಡು: ಕೇಂದ್ರವು ಕೇರಳದ ಮೇಲೆ ಹೇರುತ್ತಿರುವ ಆರ್ಥಿಕ ತಾರತಮ್ಯದ ವಿರುದ್ಧ ರಾಜ್ಯ ಸರ್ಕಾರಿ ನೌಕರರು , ಶಿಕ್ಷಕರ ಕ್ರಿಯಾ ಮಂಡಳಿ ಹಾಗೂ ಶಿಕ್ಷಕರ ಸೇವಾ ಸಂಘಟನೆ ಹೋರಾಟ ಸಮಿತಿ ವತಿಯಿಂದ ಸೋಮವಾರ ಕರಾಳ ದಿನವನ್ನು ಆಚರಿಸಲಾಯಿತು. ಸರ್ಕಾರಿ ನೌಕರರು ಕಪ್ಪು ಬ್ಯಾಡ್ಜ್ ಧರಿಸಿ ಕೆಲಸಕ್ಕೆ ಹಾಜರಾಗಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು.
ಕಾಸರಗೋಡು ಸಿವಿಲ್ ಸ್ಟೇಶನ್ ವಠಾರದಲ್ಲಿ ನಡೆದ ಪ್ರತಿಭಟನಾ ಸಭೆಯ ನೇತೃತ್ವವನ್ನು ಜಂಟಿ ಮಂಡಳಿ ರಾಜ್ಯ ಕಾರ್ಯದರ್ಶಿ ಸದಸ್ಯೆ ಎ.ಅಜಿನಾ ಉದ್ಘಾಟಿಸಿದರು. ಕೆ ಭಾನುಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಆ್ಯಕ್ಷನ್ ಕೌನ್ಸಿಲ್ ನಾಯಕರಾದ ಕೆ ರಾಘವನ್. ವಿ ಶೋಭಾ ವಿ ಚಂದ್ರನ್, ಟಿ ದಾಮೋದರನ್‍ಟಿ ಪ್ರಕಾಶನ್, ಕೆ ವಿ ರಾಘವನ್, ಎನ್ ಕೆ ಲಸಿತಾ, ಹೋರಾಟ ಸಮಿತಿ ಮುಖಂಡರಾದ ಸುರೇಶ್ ಬಾಬು, ಸುನೀಲ್ ಕರಿಚೇರಿ ಉಪಸ್ಥಿತರಿದ್ದರು. ಕೆ ಹರಿದಾಸ್ ಸ್ವಾಗತಿಸಿದರು.


