ಕಾಸರಗೋಡು: ಗ್ಯಾಸ್ ಪೈಪ್‍ಲೈನ್ ಅಳವಡಿಸಿದ್ದ ಕಾಲುವೆಗೆ ಬಿದ್ದು, ಮಹಿಳೆ ಗಾಯಗೊಂಡಿದ್ದಾರೆ. ಮಂಜತ್ತಡ್ಕ ನಿವಾಸಿ ಜಮೀಲಾ ಗಾಯಗೊಂಡಿದ್ದು, ಇವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನಗರದ ತಾಲೂಕು ಕಚೇರಿ ಎದುರು ರಸ್ತೆ ಅಂಚಿಗಿರುವ ಪೈಪ್‍ಲೈನ್ ದುರಸ್ತಿ ಕೆಲಸದ ಮಧ್ಯೆ ದುರಂತ ನಡೆದಿದೆ. ಕಾಲುವೆ ಮೇಲ್ಭಾಗದ ಕವಚ ಸರಿಸಿ ಒಳಗೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿರುವ ಮಧ್ಯೆ, ಸುಮಾರು ಹತ್ತು ಅಡಿ ಆಳದ ಕಾಲುವೆಯೊಳಗೆ ಮಹಿಳೆ ಆಯತಪ್ಪಿ ಬಿದ್ದಿದ್ದರು. ತಕ್ಷಣ ಸ್ಥಳದಲ್ಲಿದ್ದವರು ಮಹಿಳೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾಲುವೆಯೊಳಗೆ ಪೈಪ್ ದರಸ್ತಿ ಕೆಲಸ ನಡೆಸುವ ಮಧ್ಯೆ ಸುರಕ್ಷಾ ಬೇಲಿಯಾಗಲಿ, ಅಪಾಯ ಸೂಚಕ ಫಲಕವನ್ನಾಗಲಿ ಅಳವಡಿಸದೆ ಕಾಮಗಾರಿಗೆ ಮುಂದಾಗಿರುವ ಸಂಬಂಧಪಟ್ಟವರ ನಿರ್ಲಕ್ಷ್ಯದ ಬಗ್ಗೆ ನಾಗರಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

