ಕಾಸರಗೋಡು: ಬಸ್ಸಿನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಟ್ರಮೋಡಲ್ ಹೈಡ್ರೋಕ್ಲೋರೈಡನ್ನು ಅಬಕಾರಿ ದಳ ಸಿಬ್ಬಂದಿ ಮಂಜೇಶ್ವರ ಚೆಕ್‍ಪೋಸ್ಟ್ ಬಳಿ ವಶಪಡಿಸಿಕೊಂಡು ಒಬ್ಬನನ್ನುಬಂಧಿಸಿದ್ದಾರೆ. ಉತ್ತರ ಪ್ರದೇಶ ಮೊರಾದಾಬಾದ್ ಜಿಲ್ಲೆಯ ಇನಾಯತ್‍ಪುರ್ ಸಿಲ್ಸಾ ನಿವಾಸಿ ರಾಹತ್ ಜಾನೆ(55)ಬಂಧಿತ. ಈತನ ವಶದಲ್ಲಿದ್ದ 23.351ಗ್ರಾಂ ಟ್ರಮೋಡಲ್ ಹೈಡ್ರೋಕ್ಲೋರೈಡ್ ವಶಪಡಿಸಿಕೊಳ್ಳಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ತಪಾಸಣೆ ಮಧ್ಯೆ ಟ್ರಮೋಡಲ್ ಹೈಡ್ರೋಕ್ಲೋರೈಡ್ ಪತ್ತೆಯಾಗಿದೆ. ಅಬಕಾರಿ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಕೆ ಶಿಜಿಲ್‍ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಮಂಗಳೂರಿನಿಂದ ಕೇರಳ ಹಾಗೂ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್‍ಗಳ ಮೂಲಕ ಕಾಸರಗೋಡಿಗೆ ವ್ಯಾಪಕವಾಗಿ ಮಾದಕ ದ್ರವ್ಯ ಸಾಗಾಟ ನಡೆಯುತ್ತಿರುವ ಬಗ್ಗೆ ದೂರುಗಳಿದ್ದು, ಅಪರೂಪಕ್ಕೊಂದು ಪ್ರಕರಣ ಮಾತ್ರ ಅಬಕಾರಿ ಅಥವಾ ಪೊಲಿಸರಿಗೆ ಪತ್ತೆಹಚ್ಚಲು ಸಾಧ್ಯವಾಗುತ್ತಿದೆ.

