ಕೋಝಿಕೋಡ್: ಬಸ್ಸಿನಲ್ಲಿ ಲೈಂಗಿಕ ದೌರ್ಜನ್ಯದ ಆರೋಪಿಸಿ ವಿಡಿಯೋ ಬಿಡುಗಡೆಗೊಂಡ ಬಳಿಕ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಯ ವೀಡಿಯೊವನ್ನು ಬಿಡುಗಡೆ ಮಾಡಿದ ವಡಕರ ಮೂಲದ ಶಿಮ್ಜಿತಾ ಮುಸ್ತಫಾಳನ್ನು ಬಂಧಿಸಲಾಗಿದೆ. ಅವರ ಸಂಬಂಧಿಯ ಮನೆಯಿಂದ ವೈದ್ಯಕೀಯ ಕಾಲೇಜು ಪೋಲೀಸರು ಬಂಧಿಸಿದ್ದಾರೆ.
ಇದಕ್ಕೂ ಮೊದಲು, ಪೆÇಲೀಸರು ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸಿದ್ದರು. ಇದರ ನಂತರ, ನಾಪತ್ತೆಯಾಗಿದ್ದ ಶಿಮ್ಜಿತಾ ಮುಸ್ತಫಾಗಾಗಿ ಪೆÇಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಬಳಿಕ ಶಿಮ್ಜಿತಾ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದಳು ಕೋಝಿಕೋಡ್ ಜಿಲ್ಲಾ ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸುತ್ತಿರುವಾಗ ಆಕೆಯನ್ನು ಬಂಧಿಸಲಾಯಿತು. ಶಿಮ್ಜಿತಾಳನ್ನು ಬಂಧಿಸಿದ್ದು ಪೋಲೀಸರು ಆಕೆಯ ಮೊಬೈಲ್ ಪೋನ್ ಅನ್ನು ಪರಿಶೀಲಿಸುತ್ತಿದ್ದಾರೆ.
ಪೋನ್‍ನಲ್ಲಿರುವ ದೃಶ್ಯಗಳನ್ನು ನಾಶಪಡಿಸಿದ್ದರೆ, ತಾಂತ್ರಿಕ ತಜ್ಞರ ಸಹಾಯದಿಂದ ಅವುಗಳನ್ನು ಮರುಪಡೆಯಲಾಗುತ್ತದೆ.
ಶಿಮ್ಜಿತಾ ಬಸ್ಸಿನಲ್ಲಿ ಚಿತ್ರೀಕರಿಸಿದ ಮೂಲ ವೀಡಿಯೊವನ್ನು ಲೈಂಗಿಕ ದೌರ್ಜನ್ಯದ ಹೆಸರಿನಲ್ಲಿ ಸಂಪಾದಿಸಿ ಪ್ರಸಾರ ಮಾಡಲಾಗಿದೆಯೇ ಎಂದು ಪೆÇಲೀಸರು ತನಿಖೆ ನಡೆಸಲಿದ್ದಾರೆ.
ಬಸ್ಸಿನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೋಲೀಸರಿಗೆ ಯಾವುದೇ ಅಸಾಮಾನ್ಯ ದೃಶ್ಯಗಳು ಕಂಡುಬರಲಿಲ್ಲ. ಮೊಬೈಲ್ ಪೋನ್‍ನಲ್ಲಿರುವ ವೀಡಿಯೊದಲ್ಲಿಯೂ ಆಪಾದಿತ ದೃಶ್ಯಾವಳಿಗಳು ಇಲ್ಲದಿದ್ದರೆ, ಸಾಕ್ಷ್ಯ ನಾಶದ ಆರೋಪಕ್ಕೂ ಶಿಮ್ಜಿತಾ ಸಿಲುಕುತ್ತಾಳೆ.

