ಮಂಜೇಶ್ವರ: ಪ್ರಸ್ತುತ ತುಳುನಾಡಿನೆಲ್ಲೆಡೆ ತನ್ನ ಕೊಡುಗೆ, ದಾನಗಳ ಮೂಲಕ ಮನೆಮಾತಾಗಿರುವ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರೀಯ ಸಮಿತಿಯ ಮೊದಲ ಸಭೆಯು ಚಿಗುರುಪಾದೆಯ ಸೇವಾ ಬಳಗದ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಡಾ.ಸದಾಶಿವ ಕೆ. ಶೆಟ್ಟಿ ಕುಳೂರು ಕನ್ಯಾನ ವಹಿಸಿದ್ದರು. ಸಭೆಯಲ್ಲಿ ಕೊಡುಗೈ ದಾನಿ ಕೆ.ಕೆ. ಶೆಟ್ಟಿ ಕುತ್ತಿಕಾರ್ ಉಪಸ್ಥಿತರಿದ್ದರು. ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಮುಂದೆ ನಡೆಯುವ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಹಾಗೂ ಹೊಸ ಯೋಜನೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಆಯಾ ವಿಭಾಗದ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚುವ ಬಗ್ಗೆ ತೀರ್ಮಾನಿಸಲಾಯಿತು. ಶೀಘ್ರದಲ್ಲಿ ಸೇವಾ ಬಳಗದ ಕೇಂದ್ರ ಕಚೇರಿಯಲ್ಲಿ ಆಂಬುಲೆನ್ಸ್ ಸೌಕರ್ಯ ವ್ಯವಸ್ಥೆಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಹೊಸದಾಗಿ ಆಯ್ಕೆಯಾದ ಕೋಶಾಧಿಕಾರಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಸಭೆಯಲ್ಲಿ 35 ಕೇಂದ್ರ ಸಮಿತಿ ಸದಸ್ಯರು ಉಪಸ್ಥಿತರಿದ್ದು ಉಪಾಧ್ಯಕ್ಷ ನಾರಾಯಣ ನ್ಯಾಕ್ ನಡುಹಿತ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ಕನ್ಯಾನ, ಬಳಗದ ಪಿ.ಆರ್.ಓ ಕಾರ್ತಿಕ್ ಶೆಟ್ಟಿ ಮಜಿಬೈಲು, ಅಭಿಮತ ಟಿವಿ ಮುಖ್ಯಸ್ಥೆ ಮಮತಾ ಶೆಟ್ಟಿ, ಪ್ರಗತಿಪರ ಕೃಷಿಕ ಪಿ.ಆರ್. ಶೆಟ್ಟಿ ಪೆÇಯ್ಯೇಲು ಮಾತನಾಡಿದರು. ಬಳಗದ ಪ್ರಧಾನ ಕಾರ್ಯದರ್ಶಿ ಜಯರಾಜ ಶೆಟ್ಟಿ ಚಾರ್ಲ ಸ್ವಾಗತಿಸಿ, ಕೋಶಾಧಿಕಾರಿ ಮೀರಾ ಆಳ್ವ ವಂದಿಸಿದರು.

.jpg)
