ಕುಂಬಳೆ: ನಾಯ್ಕಾಪು ನಿವಾಸಿ ನ್ಯಾಯವಾದಿ ಚೈತ್ರಾರ ಮನೆಯಿಂದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಹಣ ಕಳವು ನಡೆಸಿದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿ ಕಾಸರಗೋಡು, ಕುಂಬಳೆ ಪೆÇಲೀಸ್ ಠಾಣೆಯ ವಿವಿಧೆಡೆ ಕ್ವಾರ್ಟರ್ಸ್‍ನಲ್ಲಿ ವಾಸಿಸುವ ಇಬ್ರಾಹಿಂ ಯಾನೆ ಕಲಂದರ್ ಇಬ್ರಾಹಿಂ ಎಂಬಾತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಈತನನ್ನು ಹೆಚ್ಚಿನ ತನಿಖೆಗೊಳಪಡಿಸುವ ಅಂಗವಾಗಿ ರಿಮಾಂಡ್‍ನಿಂದ ಕಸ್ಟಡಿಗೆ ತೆಗೆಯಲು ಅರ್ಜಿ ಸಲ್ಲಿಸುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಇದೇ ವೇಳೆ ಈ ಕಳವು ಕೃತ್ಯದಲ್ಲಿ ಇಬ್ರಾಹಿಂ ಸಹಿತ ನಾಲ್ಕು ಮಂದಿ ಭಾಗಿಯಾಗಿರಬಹುದೆಂದು ಪೆÇಲೀಸರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಇಬ್ರಾಹಿಂನನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆ ನಡೆಸಲಾಗುವುದೆಂದು ಪೆÇಲೀಸರು ತಿಳಿಸಿದ್ದಾರೆ.
ಚೈತ್ರಾರ ಮನೆಯಿಂದ 29 ಪವನ್ ಚಿನ್ನ, 25 ಸಾವಿರ ರೂ.ಗಳ ಬೆಳ್ಳಿ ಆಭರಣಗಳು ಹಾಗೂ 5 ಸಾವಿರ ರೂಪಾಯಿ ಕಳವಿಗೀಡಾಗಿತ್ತು. ಈ ಪೈಕಿ ಆರೋಪಿ ಮಾರಾಟಗೈದ ಅಲ್ಪ ಪ್ರಮಾಣದ ಚಿನ್ನವನ್ನು ಮಾತ್ರವೇ ಕರ್ನಾಟಕದ ಜ್ಯುವೆಲ್ಲರಿಯೊಂದರಿಂದ ವಶಪಡಿಸಲು ಸಾಧ್ಯವಾಗಿದೆ. ಬಾಕಿ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಎಲ್ಲಿವೆ ಎಂದು ತಿಳಿಯಬೇಕಾಗಿದೆ. ಅಲ್ಲದೆ ಕಳವಿನಲ್ಲಿ ಭಾಗಿಯಾದ ಇತರರ ಕುರಿತು ತಿಳಿಯಲು ಆರೋಪಿಯನ್ನು ಸಮಗ್ರ ತನಿಖೆಗೊಳಪಡಿಸಬೇಕಾಗಿ ದೆಯೆಂದು ಪೆÇಲೀಸರು ತಿಳಿಸಿದ್ದಾರೆ.
ಈ ತಿಂಗಳ 18ರಂದು ಸಂಜೆ 6ರಿಂದ ರಾತ್ರಿ 8 ಗಂಟೆ ಮಧ್ಯೆ ಚೈತ್ರರ ಮನೆಯಿಂದ ಕಳವು ನಡೆದಿದೆ. ಚೈತ್ರ ಹಾಗೂ ಕುಟುಂಬ ಕಣಿಪುರ ಕ್ಷೇತ್ರಕ್ಕೆ ತೆರಳಿದ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿ ಕಪಾಟಿನಲ್ಲಿದ್ದ ನಗ-ನಗದು ದೋಚಿದ್ದಾರೆ.
ಕಳವು ಬಳಿಕ ಆಡಂಬರ ಜೀವನ ನಡೆಸುವ ಆರೋಪಿ:
ಕಳವು ಬಳಿಕ ಆಡಂಬರ ಜೀವನ ನಡೆಸುವುದು ನಾಯ್ಕಾಪು ಮನೆ ಕಳವು ಪ್ರಕರಣದಲ್ಲಿ ಸೆರೆಗೀಡಾದ ಆರೋಪಿ ಇಬ್ರಾಹಿಂ ಯಾನೆ ಕಲಂದರ್ ಇಬ್ರಾಹಿಂನ ರೀತಿಯಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ನಾಯ್ಕಾಪು ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾಗುವ ವೇಳೆ ಈತ ಧರಿಸಿದ್ದುದು 15 ಸಾವಿರ ರೂಪಾಯಿ ಮೌಲ್ಯದ ಶೂಗಳನ್ನಾಗಿದೆಯೆಂದೂ ಹೇಳಲಾಗುತ್ತಿದೆ. ಈ ಹಿಂದೆಯೂ ಈತ ಹಲವು ಕಳವು ಪ್ರಕರಣಗಳಲ್ಲಿ ಶಾಮೀಲಾಗಿದ್ದಾನೆ.
2024 ಫೆ. 7ರಂದು ಕರ್ನಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯಿಂದ 2 ಕಿಲೋ ಚಿನ್ನ ಹಾಗೂ 17 ಲಕ್ಷ ರೂಪಾಯಿ ಕಳವು ನಡೆಸಿದ ಆರೋಪಿಗಳ ಪೈಕಿ ಈತನೂ ಒಳಗೊಂಡಿದ್ದಾನೆ. ಕಳವು ಬಳಿಕ ಪೆÇಲೀಸರು ಸೆರೆಹಿಡಿದು ತನಿಖೆಗೊಳಪಡಿಸಿದರೂ ಕಳವುಗೈದ ಸೊತ್ತುಗಳ ಕುರಿತಾಗಿ, ಇತರ ಆರೋಪಿಗಳ ಕುರಿತಾಗಿ ಈತ ಯಾವುದೇ ಮಾಹಿತಿ ನೀಡುತ್ತಿಲ್ಲವೆನ್ನಲಾಗಿದೆ. ಆದ್ದರಿಂದ ಈತನಿಂದ ಮಾಹಿತಿ ಸಂಗ್ರಹಿಸಲು ಸಮಗ್ರ ತನಿಖೆ ಅಗತ್ಯವಿದೆಯೆಂದೂ ಪೆÇಲೀಸರು ತಿಳಿಸುತ್ತಿದ್ದಾರೆ.

