ಪೆರ್ಲ: ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್.ಎಸ್.ಎಸ್. ವಿದ್ಯಾರ್ಥಿಗಳ ಸಪ್ತದಿನ ಶಿಬಿರದ ಸಂದರ್ಭದಲ್ಲಿ ಬೆಂಗಳೂರಿನ ಸುರಕ್ಷಾ ವೆಲ್ಪೇರ್ ಟ್ರಸ್ಟ್ ನ ರಾಮಪ್ರಸಾದ್ ರೈ ಬಾಳೆಮೂಲೆ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಗಳನ್ನು ಕೊಡುಗೆಯಾಗಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾ.ಪಂ ಸದಸ್ಯ ಸುಧಾಕರ ಮಾಸ್ತರ್ ಅವರು ವಹಿಸಿದ್ದರು. ಕಾಟುಕುಕ್ಕೆ ಶಾಲೆಯ ಪಿಟಿಎ ಉಪಾಧ್ಯಕ್ಷ ಶ್ಯಾಮಸುಂದರ ಅವರು ಶುಭಹಾರೈಸಿದರು. ವೇದಿಕೆಯಲ್ಲಿ ಪ್ರಸಾದ್ ರೈ ಮುಂಗ್ಲಿಕಾನ, ಬಾಳೆಮೂಲೆ ಶಾಲೆಯ ಪಿಟಿಎ ಅಧ್ಯಕ್ಷ ನಾರಾಯಣ ಕುರಿಯುತ್ತಡ್ಕ, ಎಸ್.ಎಂ.ಸಿ. ಅಧ್ಯಕ್ಷ ನಾರಾಯಣ, ಮಾತೃ ಸಂಘದ ಅಧ್ಯಕ್ಷೆ ಪದ್ಮಾವತಿ, ಚನಿಯಪ್ಪ, ಹಿರಿಯ ಫಯರ್ ಆಂಡ್ ಸೇಪ್ಟಿ ಆರ್.ಡಿ.ಡಿ ಅಧಿಕಾರಿ ಮನೋಹರ್, ಜೀವನ್ ಮುಂತಾದವರು ಉಪಸ್ಥಿತರಿದ್ದರು. ರಾಮಪ್ರಸಾದ್ ರೈ ಅವರು ಸಮಾರಂಭವನ್ನು ಉದ್ಘಾಟಿಸಿ, ಬ್ಯಾಗ್ ಗಳನ್ನು ಕೊಡುಗೆಯಾಗಿ ನೀಡಿ ಗುರುಹಿರಿಯರ ಮಹತ್ವದ ಬಗ್ಗೆ ಅರಿವು ಮಾತನಾಡಿದರು. ರೈಯವರು ಅವರ ಟ್ರಸ್ಟ್ ನ ಮೂಲಕ ಗ್ರಾಮೀಣ ಭಾಗದ ಶಾಲೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಕಾರವನ್ನು ನಿರಂತರವಾಗಿ ನೀಡುತ್ತಿರುವ ಬಗ್ಗೆ ತಿಳಿಸಿ ಶಿಬಿರಾರ್ಥಿಗಳಿಗೆ ಸಮಾಜ ಸೇವೆಗೆ ಸ್ಪೂರ್ತಿಯಾದರು.
ಸಮಾರಂಭದಲ್ಲಿ ಕಾಟುಕುಕ್ಕೆ ಶಾಲೆಯ ಎನ್.ಎಸ್.ಎಸ್. ಸ್ವಯಂಸೇವಕರು, ಬಾಳೆಮೂಲೆ ಶಾಲೆಯ ವಿದ್ಯಾರ್ಥಿಗಳು, ಹೆತ್ತವರು, ಪಿಟಿಎ, ರೈ ಅವರ ಕುಟುಂಬ ಸದಸ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು. ಬಾಳೆಮೂಲೆ ಶಾಲೆಯ ಶಿಕ್ಷಕರು ಕಾಟುಕುಕ್ಕೆ ಶಾಲೆಯ ಶಿಕ್ಷಕರು ಮತ್ತು ರಕ್ಷಕ ಶಿಕ್ಷಕ ಸಂಘದವರು ಸೇರಿ ರೈಯವರನ್ನು ಅಭಿನಂದಿಸಿದರು. ಬಾಳೆಮೂಲೆ ಶಾಲಾ ಮುಖ್ಯೋಪಾಧ್ಯಾಯ ರಾಜೇಶ್ ಬಿ. ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗ್ರೀಷ್ಮಾ ವಂದಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ವಾಣಿ ಜಿ.ಶೆಟ್ಟಿ ನಿರೂಪಿಸಿದರು. ಕಾಸರಗೋಡು ಫಯರ್ ಆಂಡ್ ಸೇಪ್ಟೀ ವಿಭಾಗದ ಅಧಿಕಾರಗಳಿಂದ ಅಗ್ನಿ ಅವಘಡ ನಿರ್ವಹಣೆ, ಪ್ರಥಮ ಚಿಕಿತ್ಸೆ ತರಗತಿ ನಡೆಯಿತು.

.jpg)
.jpg)
