ಕಾಸರಗೋಡು: ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮಭಜನಾಮಂದಿರದಲ್ಲಿ 19ನೇ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ರಂಗಸಿರಿ ಸಾಂಸ್ಕøತಿಕ ವೇದಿಕೆ(ರಿ) ಬದಿಯಡ್ಕ ಇವರಿಂದ ಯಕ್ಷಗಾನ ಬಯಲಾಟ ನಡೆಯಿತು.ನುಳ್ಳಿಪ್ಪಾಡಿ ಕನ್ನಡ ಭವನದ ಸಂಚಾಲಕ ಡಾ ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾ ರಾಣಿ ಟೀಚರ್ ಹಾಗೂ ಶ್ರೀ ನವೀನ್ ನಾಯ್ಕ್, ಕಾಸರಗೋಡು ಕೋಟಿ ಶ್ರೀ ಧೂಮಾವತಿ ಉತ್ಸವ ಸಮಿತಿಯ ಸದ್ಯಸರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಜರಗಿತು. ಯಕ್ಷಗಾನ ಗುರುಗಳಾದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಸುದರ್ಶನ ವಿಜಯ ಪ್ರಸಂಗವನ್ನು ಪ್ರದರ್ಶಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆಯಲ್ಲಿ ವಿಕ್ರಮ್ ಮಯ್ಯ, ಮದ್ದಳೆ ಮತ್ತು ಚಕ್ರತಾಳಗಳಲ್ಲಿ ಕೃಷ್ಣಮೂರ್ತಿ ಭಟ್ ಎಡನಾಡು ಹಾಗೂ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಸಹಕರಿಸಿದರು.
ಮುಮ್ಮೇಳದಲ್ಲಿ ದೇವೇಂದ್ರನಾಗಿ ಡಾ. ಶ್ರೀಶಕುಮಾರ ಪಂಜಿತ್ತಡ್ಕ, ಸುದರ್ಶನನಾಗಿ ಡಾ. ವಿದ್ಯಾ ಆನಂದ ಭಟ್ ಕೆಕ್ಕಾರು, ವಿಷ್ಣುವಾಗಿ ಕು. ಅಭಿಜ್ಞಾ ಭಟ್ ಬೊಳುಂಬು, ಶತ್ರುಪ್ರಸೂದನನಾಗಿ ಚಿ. ಮನ್ವಿತ್ ಕೃಷ್ಣ ನಾರಾಯಣಮಂಗಲ, ಲಕ್ಷ್ಮಿಯಾಗಿ ಕು. ಭಾಗ್ಯಶ್ರೀ ಕುಂಚಿನಡ್ಕ, ಅಗ್ನಿಯಾಗಿ ಕು. ಮೈಥಿಲಿ ಕೊಟ್ಟಂಗುಳಿ, ವಾಯುವಾಗಿ ಕು. ಧೃತಿ , ಅಸುರ ಸೇನಾಪ್ರಮುಖರಾಗಿ ಚಿ. ಲಿಖಿತ್ ಹಾಗೂ ಚಿ. ಸೃಜನ್ ರೈ ಪಾತ್ರಗಳಿಗೆ ಜೀವನೀಡಿದರು. ನೇಪಥ್ಯದಲ್ಲಿ ರಾಜೇಂದ್ರ ವಾಂತಿಚ್ಚಾಲು ಸಹಕರಿಸಿದರು.



