ಉಪ್ಪಳ: ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ಪ್ರಸ್ತುತ ವರ್ಷದಲ್ಲಿ ವಿದ್ಯಾಭ್ಯಾಸ ಕ್ಷೇತ್ರದಿಂದ ನಿವೃತ್ತಿ ಹೊಂದುತ್ತಿರುವ ಜಿಲ್ಲೆಯ ಹಿರಿಯ ದಿಗ್ಗಜ ಅಧಿಕಾರಿಗಳಿಗೆ ಗೌರಾವರ್ಪಣೆ ಸಮಾರಂಭ ನಡೆಯಿತು. ಜೊತೆಗೆ ಕ್ರಿಸ್ಮಸ್ ಆಚರಣೆ ನಡೆಯಿತು.
ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕ ಮಧುಸೂದನ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತಾ, ಮಂಜೇಶ್ವರ ಬಿ.ಆರ್.ಸಿ.ಯ ಬ್ಲಾಕ್ ಕೋರ್ಡಿನೇಟರ್ ಸುಮಾದೇವಿ, ಯಸ್.ಯಸ್.ಎ. ಯು.ಪಿ.ಯಸ್. ಚೇವಾರು ಶಾಲೆಯ ಮುಖ್ಯ ಶಿಕ್ಷಕ, ಮುಖ್ಯೋಪಾಧ್ಯಾಯ ಫಾರ್ಮ್‍ನ ಕಾರ್ಯದರ್ಶಿ ಶ್ಯಾಮ್ ಭಟ್ ಮೊದಲಾದವರನ್ನು ಗಣ್ಯರ ಸಮಕ್ಷಮದಲ್ಲಿ ಶಾಲು ಹೊದಿಸಿ,ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಿ.ಆರ್.ಸಿ ಸಂಯೋಜಕಿ ಶಾರದಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಉಪನಿರ್ದೇಶಕ ಮಧುಸೂದನ ಉದ್ಘಾಟಿಸಿದರು. ಜಿಲ್ಲಾ ಯೋಜನಾಧಿಕಾರಿ ಬಿಜುರಾಜು, ಜಿಲ್ಲಾ ಕಾರ್ಯಕ್ರಮಾಧಿಕಾರಿ ಆಗಸ್ಟಿನ್ ಬರ್ನಾಡ್, ಜಿಲ್ಲಾ ವಿದ್ಯಾಕಿರಣ ಸಂಯೋಜಕ ಪ್ರಕಾಶ, ಡಯಟ್ ಮಾಯಿಪ್ಪಾಡಿಯ ಅಜಿತ್, ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ಜಿ.ಯಂ.ಎಲ್.ಪಿ.ಯಸ್ ಉದ್ಯಾವರ ತೋಟ ಶಾಲೆಯ ಮುಖ್ಯ ಶಿಕ್ಷಕ ಇಸ್ಮಾಯಿಲ್, ಎಸ್.ಎಸ್.ಬಿ.ಎಸ್. ಕುಂಬ್ಳೆಯ ಮುಖ್ಯ ಶಿಕ್ಷಕ ವಿಜಯಕುಮಾರ, ಜಿ.ಯಚ್.ಯಸ್. ಉದ್ಯಾವರ ಶಾಲಾ ಮುಖ್ಯ ಶಿಕ್ಷಕ ನಾರಾಯಣ ದೇಲಂಪಾಡಿ, ಅಧ್ಯಾಪಕರಾದ ರವೀಂದ್ರ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ಸಿ.ಆರ್.ಸಿ.ಯ ವಿಶೇಷ ಸಾಮಥ್ರ್ಯದ ಮಕ್ಕಳ ಅಧ್ಯಾಪಕಿ ಬಿಂದಿಯಾ ಅವರನ್ನು ಅವರ ಅತ್ಯುತ್ತಮ ಸೇವೆಗಾಗಿ ಗೌರವಿಸಲಾಯಿತು. ಎಸ್.ಎಸ್.ಕೆ. ಜಿಲ್ಲಾ ಕಚೇರಿಯ ಹಾಗೂ ಮಂಜೇಶ್ವರ ಬಿ.ಆರ್.ಸಿ.ಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಮಂಜೇಶ್ವರ ಬಿ.ಆರ್.ಸಿ.ಯ ಕ್ಲಸ್ಟರ್ ಸಂಯೋಜಕ ನಾರಾಯಣರಾಜ್ ಸ್ವಾಗತಿಸಿ, ವಿಶೇಷ ಶಿಕ್ಷಕ ಪ್ರಕಾಶ ಕುಂಬ್ಳೆ ವಂದಿಸಿದರು. ಸಿ.ಆರ್.ಸಿ. ಸಂಯೋಜಕಿ ಮೋಹಿನಿ ನಿರೂಪಿಸಿದರು.

.jpg)
.jpg)
