ಬದಿಯಡ್ಕ: ಮಾನ್ಯ ಶ್ರೀ ಮೂವರು ದೈವಗಳ ಹೊಸ್ತಿನ ಕೋಲ ನಾಳೆ(ಜ.29)ಯಿಂದ 31ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಗುರುವಾರ ಬೆಳಿಗ್ಗೆ 8ಕ್ಕೆ ಮಾನ್ಯ ಪಡುಮನೆ ಭಂಡಾರ ಮನೆಯಲ್ಲಿ ಗಣಪತಿ ಹವನ, ಸಂಜೆ 7.15ಕ್ಕೆ ಭಂಡಾರ ಮನೆಯಿಂದ ಶ್ರೀಮೂವರು ದೈವಗಳ ಭಂಡಾರ, ಶ್ರೀಪ್ಲಾಡಗತ್ತ ಚಾಮುಂಡಿ ದೈವಸ್ಥಾನಕ್ಕೆ ಆಗಮನ, ರಾತ್ರಿ 8ಕ್ಕೆ ಶ್ರೀದೈವಗಳ ತೊಡಂಙಲ್, ಮೋಂದಿಕೋಲ ನಡೆಯಲಿದೆ. 30 ರಂದು ಬೆಳಿಗ್ಗೆ 7ಕ್ಕೆ ಶ್ರೀಭಂಡಾರಿ ದೈವ, 9.30ಕ್ಕೆ ಶ್ರೀಪ್ಲಾಡಗತ್ತ ಚಾಮುಂಡಿ ದೈವದ ಆರಂಭ, 10.30ಕ್ಕೆ ಶ್ರೀದೈವದ ಬಾರಣೆ, 11 ಕ್ಕೆ ಪ್ರಸಾದ ವಿತರಣೆ, 12.30ಕ್ಕೆ ಶ್ರೀದೈವಗಳ ಭಂಡಾರ ನಿರ್ಗಮನ, ಸಂಜೆ 7.15ಕ್ಕೆ ಶ್ರೀವಿಷ್ಣುಮೂರ್ತಿ ದೈವಸ್ಥಾನಕ್ಕೆ ಭಂಡಾರ ಆಗಮನ, ಶ್ರೀದೈವದ ತೊಡಂಙಲ್, ರಾತ್ರಿ 8ಕ್ಕೆ ಶ್ರೀಪಡು ಧೂಮಾವತಿ ದೈವಸ್ಥಾನಕ್ಕೆ ಭಂಡಾರ ಆಗಮನ ಹಾಗೂ ತೊಡಂಙಲ್, 8.30ಕ್ಕೆ ಶ್ರೀಪಡು ಧೂಮಾವತಿ ದೈವದ ಮೋಂದಿ ಕೋಲ, 9.30ಕ್ಕೆ ಶ್ರೀವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಲಿದೆ. 31 ರಂದು ಬೆಳಿಗ್ಗೆ 8ಕ್ಕೆ ಶ್ರೀಮಹಾವಿಷ್ಣುಮೂರ್ತಿ ದೈವ ಆರಂಭ, 9ಕ್ಕೆ ಶ್ರೀವಿಷ್ಣುಮೂರ್ತಿ ದೈವದ ಪೂಡುಂಗಲ್ಲು ಸಂದರ್ಶನ, ಮಾನ್ಯ ವೆಂಕಟ್ರಮಣ ದೇವಾಲಯಕ್ಕೆ ಭೇಟಿ ಹಾಗೂ ದೇವಾಲಯದಲ್ಲಿ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 11.30ಕ್ಕೆ ಶ್ರೀವಿಷ್ಣುಮೂರ್ತಿ ದೈವದ ಬಾರಣೆ, 12ಕ್ಕೆ ಪ್ರಸಾದ ವಿತರಣೆ, 1ಕ್ಕೆ ಅನ್ನದಾನ, 2 ರಿಂದ ಶ್ರೀದೈವದ ಭಂಡಾರ ನಿರ್ಗಮನ, ಸಂಜೆ 6ಕ್ಕೆ ಶ್ರೀಪಡು ಧೂಮಾವತಿ ದೈವದ ಆರಂಭ, 6.30ಕ್ಕೆ ದೈವದ ಬಾರಣೆ, 7ಕ್ಕೆ ಪ್ರಸಾದ ವಿತರಣೆ, 7.30ಕ್ಕೆ ಶ್ರೀದೈವದ ಭಂಡಾರ ನಿರ್ಗಮನ, ರಾತ್ರಿ 9ಕ್ಕೆ ಮಾನ್ಯ ಪಡುಮನೆ ಭಂಡಾರ ಮನೆಯಲ್ಲಿ ಕಡವು ಧೂಮಾವತಿ, ಕೊರವನ್, ಮಂತ್ರವಾದಿ ಸಹಿತ ಒಂದು ಕಡಿಮೆ ನಲ್ವತ್ತು ದೈವಗಳ ಕೋಲದೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ.

