ಬದಿಯಡ್ಕ: ಪೆರ್ಮುಖ ಕನಕಪಾಡಿ ರಕ್ತೇಶ್ವರಿ, ನಾಗ, ಗುಳಿಗ ಕಟ್ಟೆಗಳ ಪ್ರತಿಷ್ಠಾ ಮಹೋತ್ಸವ ಜ.21 ರಿಂದ 25 ರವರೆಗೆ ನಡೆಯಲಿದೆ. 21 ರಮದು ಸಂಜೆ 6: ರಿಂದ ದೇವತಾ ಪ್ರಾರ್ಥನೆ, ಸುದರ್ಶನ ಹವನ, ಭಗವತೀ ಸೇವೆ, ಬಾಧಾಕರ್ಷಣೆ, ಉಚ್ಛಾಟನಾ ಕ್ರಿಯೆ, ಪ್ರಸಾದ ಭೋಜನ ನಡೆಯಲಿದೆ.
22 ರಂದು ಬೆಳಿಗ್ಗೆ 8ಕ್ಕೆ ತಿಲಹವನ, ಚಕ್ರಾಬ್ಜಪೂಜೆ, ದ್ವಾದಶಮೂರ್ತಿ ಬ್ರಾಹ್ಮಣ ಆರಾಧನೆ, ಪ್ರಸಾದ ಭೋಜನ ನಡೆಯಲಿದೆ. 24 ರಂದು ಸಂಜೆ 6 ರಿಂದ ದೇವತಾ ಪ್ರಾರ್ಥನೆ, ಪ್ರಾಸಾದ ಶುದ್ದಿ, ರಾಷ್ನೋಘ್ನ ಹವನ, ವಾಸ್ತು ಹವನ, ವಾಸ್ತುಬಲಿ, ವಾಸ್ತುಪುಣ್ಯಹ ನಡೆಯಲಿದೆ. 25 ರಂದು ಭಾನುವಾರ ಬೆಳಿಗ್ಗೆ 7 ರಿಂದ ಶ್ರೀ ಮಹಾಗಣಪತಿ ಹವನ, ಕಲಶ ಪೂಜೆ, 10ಕ್ಕೆ ಕನ್ಯಾಲಗ್ನ ಶುಭ ಮುಹೂರ್ತದಲ್ಲಿ ಶ್ರೀ ರಕ್ತೇಶ್ವರಿ ನಾಗ ಹಾಗೂ ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ರಕ್ತೇಶ್ವರಿ ತಂಬಿಲ, ನಾಗ ತಂಬಿಲ, ಗುಳಿಗ ತಂಬಿಲ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

.jpg)
