ಪೆರ್ಲ: ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ಸತತ ಮೂರನೇ ಬಾರಿಗೆ ಕಾಟುಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಹೈಸ್ಕೂಲ್ ಯಕ್ಷಗಾನದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದು ದಾಖಲೆ ನಿರ್ಮಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ತ್ರಿಶೂರಲ್ಲಿ ನಡೆದ ರಾಜ್ಯ ಕಲೋತ್ಸವದ ವೇದಿಕೆಯಲ್ಲಿ ಪ್ರದರ್ಶನಗೊಂಡ ಬಬ್ರುವಾಹನ ಕಾಳಗ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶರ್ಮ ಕಾಟುಕುಕ್ಕೆ, ಚೆಂಡೆಯಲ್ಲಿ ವರ್ಷಿತ್ ಕೆಜ್ಜೆಕ್ಕಾರು, ಮದ್ದಳೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಚಕ್ರತಾಳದಲ್ಲಿ ಬಾಲಕೃಷ್ಣ ಏಳ್ಳಾನ ಹಾಗೂ ವೇಷಭೂಷಣದಲ್ಲಿ ಶ್ರೀ ದುರ್ಗಾಂಬ ವೇಷಭೂಷಣ ಮಲ್ಲ ಸಹಕರಿಸಿದರು.
ವಿದ್ಯಾರ್ಥಿಗಳಾದ ಸ್ಕಂದ ಎಸ್(ಬಬ್ರುವಾಹನ), ಆತ್ಮಿಕ್(ವೃಷಕೇತು), ಹರ್ಷಲ್ ಎಂ.(ಅರ್ಜುನ), ಲಿಖಿತ್(ಚಿತ್ರಾಂಗದೆ), ರಿತೇಶ್ (ಅನುಸಾಲ್ವ), ಉಲ್ಲಾಸ್ ಕುಮಾರ್(ಮಂತ್ರಿ), ಶ್ರೇಯಸ್(ಕೃಷ್ಣ) ಪಾತ್ರಗಳನ್ನು ನಿರ್ವಹಿಸಿದರು. ಯಕ್ಷಗುರು ಬಾಲಕೃಷ್ಣ ಏಳ್ಕಾನ ತರಬೇತಿ ನೀಡಿ ನಿರ್ದೇಶಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಮಾಯಿಲೆಂಗಿ, ಚಂದ್ರಹಾಸ ಅರೆಕ್ಕಾಡಿ ಮತ್ತು ಶಿವಕುಮಾರ್ ಅರೆಕ್ಕಾಡಿ ಸಹಕರಿಸಿದ್ದರು. ರಾಜ್ಯ ಮಟ್ಟದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು.

.jpg)
