ಭದ್ರತಾ ಪಡೆಯ (ಯೋಧರು ನಡೆಸಿದ ಸಾಂಪ್ರದಾಯಿಕ ಪಥಸಂಚಲನ ಮತ್ತು ಅವರ ಆಕ್ರಮಣಕಾರಿ ನಡಿಗೆಯನ್ನು ನೋಡಲು ಸಾವಿರಾರು ಪ್ರವಾಸಿಗರು ಗಡಿಯಲ್ಲಿ ಜಮಾಯಿಸಿದ್ದರು. ಲರಿಯಲ್ಲಿ ಕುಳಿತಿದ್ದ ಸಾವಿರಾರು ಜನರು ‘ಭಾರತ್ ಮಾತಾ ಕಿ ಜೈ’ ಮತ್ತು ‘ವಂದೇ ಮಾತರಂ’ ಎಂಬ ಘೋಷಣೆಗಳನ್ನು ಕೂಗುತ್ತಾ ಯೋಧರನ್ನು ಹುರಿದುಂಬಿಸಿದರು. ಗಣರಾಜ್ಯೋತ್ಸವದ ಪ್ರಯುಕ್ತ ಭಾರತೀಯ ಬಿಎಸ್ಎಫ್ ಯೋಧರು ಪಾಕಿಸ್ತಾನಿ ರೇಂಜರ್ಸ್‌ಗೆ ಸಿಹಿ ಹಂಚುವ ಮೂಲಕ ಸೌಹಾರ್ದತೆಯನ್ನು ಪ್ರದರ್ಶಿಸಿದರು. ಇದು ಗಡಿಯಲ್ಲಿನ ಉದ್ವಿಗ್ನತೆಯ ನಡುವೆಯೂ ನಡೆಯುವ ಒಂದು ಸಾಂಪ್ರದಾಯಿಕ ಆಚರಣೆಯಾಗಿದೆ.77ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅಟ್ಟಾರಿ ಗಡಿಯ ಸುತ್ತಮುತ್ತ ಬಿಗಿ ಪೊಲೀಸ್ ಮತ್ತು ಅರೆಸೇನಾ ಪಡೆಯ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಡ್ರೋನ್ ಮತ್ತು ಸಿಸಿಟಿವಿಗಳ ಮೂಲಕ ಹದ್ದಿನ ಕಣ್ಣಿಡಲಾಗಿತ್ತು.

