ಬದಿಯಡ್ಕ: ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ನೇತೃತ್ವದಲ್ಲಿ ತ್ರಿಸ್ಥರ ಪಂಚಾಯತಿ ಚುನಾವಣೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿಯ ವಿವಿಧ ವಾರ್ಡುಗಳಿಂದ ವಿಜೇತರಾದ ಜನಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಬದಿಯಡ್ಕ ಸಂಸ್ಕøತಿ ಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಸ್ಪೆಷಲ್ ಸ್ಕೂಲ್ ಉಳಿಯತ್ತಡ್ಕದ ನಿರ್ದೇಶಕ ಉದಯ ಕುಮಾರ್ ಮುಂಡೋಡು ವಹಿಸಿದ್ದರು. ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ನಿಟ್ಟೋಣಿ ಬಂದ್ಯೋಡು ಹಾಗೂ ಜಾನಪದ ಕಲಾವಿದ ಶಂಕರ್ ಸ್ವಾಮಿಕೃಪಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಮೊಗೇರ ಸಂಘದ ಕೋಶಾಧಿಕಾರಿ ಗೋಪಾಲ ದರ್ಬೆತ್ತಡ್ಕ, ಜಿಲ್ಲಾ ಮೊಗೇರ ಸಂಘದ ಮಾಜಿ ಅಧ್ಯಕ್ಷ ಹರೀಶ್ಚಂದ್ರ ಪುತ್ತಿಗೆ, ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಜಿಲ್ಲಾ ಸಮಿತಿ ಉಪಾಧ್ಯಕ್ಷ ಸುರೇಶ ಅಜಕ್ಕೋಡು, ಬಾಲಕೃಷ್ಣ.ಯಂ, ಸುನಂದ ಟೀಚರ್ ಕುಂಬ್ಳೆ, ಜಯಂತ ಬಾರಡ್ಕ, ಮಂಜುನಾಥ ಕಲಾವೃಂದ ಬಾರಡ್ಕ ಇದರ ಅಧ್ಯಕ್ಷ ರಾಜಶೇಖರ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಾದ ಶಂಕರ.ಡಿ(ಬದಿಯಡ್ಕ ಗ್ರಾಮ ಪಂಚಾಯತಿು ಅಧ್ಯಕ್ಷರು), ವಸಂತ ಅಜಕ್ಕೋಡು(ಚೆಂಗಳ ಗ್ರಾಮ ಪಂಚಾಯತಿ ಅಧ್ಯಕ್ಷರು), ರಾಮಪ್ಪ ಮಂಜೇಶ್ವರ(ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯರು) ಗಂಗಾಧರ ಗೋಳಿಯಡ್ಕ (ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯರು), ಹರೀಶ.ಎ(ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯರು), ಪ್ರಜ್ಞಾ. ಪಿ.ಜೆ (ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯೆ) ಅವರನ್ನು ಅಭಿನಂದಿಸಲಾಯಿತು. ಅಂಬೇಡ್ಕರ್ ವಿಚಾರ ವೇದಿಕೆಯ ಜೊತೆ ಕಾರ್ಯದರ್ಶಿ ಸುರೇಖ ಬಾರಡ್ಕ ಸ್ವಾಗತಿಸಿ, ಅಧ್ಯಕ್ಷ ರಾಮ ಪಟ್ಟಾಜೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸುಂದರ ಬಾರಡ್ಕ ನಿರೂಪಿಸಿದರು.

.jpg)
