ಕಾಸರಗೋಡು: ಕಳವುಗೈದು ಸಾಗಿಸುತ್ತಿದ್ದ ಬೈಕ್ ಟಿಪ್ಪರ್‍ಗೆ ಡಿಕ್ಕಿಯಾಗಿ ನಿಲ್ಲಿಸದೆ ಪರಾರಿಯಾಗುವ ಮಧ್ಯೆ ರಾಜಾಪುರಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ಮಹಮ್ಮದ್ ಇಶಾಮ್ ಅಲಿಯಾಸ್ ಪಮೀಜ್, ತ್ರಿಶ್ಯೂರ್ ಚಾವಕ್ಕಾಡ್ ನಿವಾಸಿ ಅಮಲ್ ಹಾಗೂ ಕೊಲ್ಲಂ ನಿವಾಸಿಅನ್‍ಸೀಲ್ ಬಂಧಿತರು.
ಕಾಸರಗೋಡಿನಲ್ಲಿ ಟಿಪ್ಪರ್‍ಗೆ ಡಿಕ್ಕಿಯಾಗಿದ್ದ ಬೈಕ್, ನಂತರ ನಿಲ್ಲಿಸದೆ ಪರಾರಿಯಾಗಲೆತ್ನಿಸಿದಾಗ ಹಿಂಬಾಲಿಸಿ ಸೆರೆ ಹಿಡಿದಿದ್ದರು. ತಪಾಸಣೆ ನಡೆಸಿದಾಗ ಬೈಕ್ ವಾರಾಪುಳಂ ಚಿರಪ್ಪಾಡಂ ನಿವಾಸಿ ಸೂಫಲಿ ಎಂಬವರ ಮನೆ ಸನಿಹದ ಶೆಡ್ಡಿನಿಂದ ಡಿ. 9ರಂದು ಕಳವಾಗಿತ್ತೆನ್ನಲಾಗಿದೆ. ಅಮಲ್ ಮತ್ತು ಅನ್‍ಸೀಲ್ ಕಳವುಗೈದ ಬೈಕನ್ನು ಕಾಸರಗೋಡು ನಿವಾಸಿ ಇಷಾಮ್‍ಗೆ ಹಸ್ತಾಂತರಿಸಿದ್ದರು. ಬಂಧಿತರು ಮಾದಕ ದ್ರವ್ಯ ಸಾಗಾಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಕಳವುಗೈದ ವಾಹನಗಳನ್ನು ಮಾದಕ ದ್ರವ್ಯ ಸಾಗಾಟ ಸೇರಿದಂತೆ ಸಮಾಜಬಾಹಿರ ಕೃತ್ಯಗಳಿಗೆ ಬಳಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

