ಕಾಸರಗೋಡು: ನಗರದ ಬೀರಂತಬೈಲಿನಲ್ಲಿ ಬೆಂಕಿಗಾಹುತಿಯಾದ ಪುಷ್ಪ ಎಂಬವರ ಮನೆಯನ್ನು ನವೀಕರಿಸಿ ನೀಡುವ ನಿಟ್ಟಿನಲ್ಲಿ ಕುಸಿದ ಮನೆಯ ಸ್ಥಳವನ್ನು ಶ್ರಮದಾನ ಮೂಲಕ ಶುಚಿಗೊಳಿಸುವ ಕಾರ್ಯ ನಡೆಯಿತು.
ನಗರಸಭಾ 5ನೇ ವಾರ್ಡಿನ ಕೌನ್ಸಿಲ್ಲರ್ ಹರೀಶ್ ಮತ್ತು ಶ್ರೀ ವೀರ ಹನುಮಾನ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ, ಬಿಲ್ಲವ ಸೇವಾ ಸಂಘದ ಗೌರವಧ್ಯಕ್ಷರೂ ಆದ ಎ ಕೇಶವ ಅವರ ನೇತೃತ್ವದಲ್ಲಿ ಶುಚೀಕರಣ ಕಾರ್ಯ ಆಯೋಜಿಸಲಾಗಿತ್ತು. ಶ್ರೀ ವೀರ ಹನುಮಾನ್ ಪ್ರಾದೇಶಿಕ ಸಮಿತಿಯ ಹಾಗೂ ಸದಸ್ಯರ ಮೇಲ್ನೋಟದಲ್ಲಿ ಕಾರ್ಯಕರ್ತರ ನೆರವಿನೊಂದಿಗೆ ಶ್ರಮದಾನ ನಡೆಸಲಾಯಿತು.
ಮಾಜಿ ನಗರ ಸಭಾ ವಿಪಕ್ಷ ನಾಯಕ ಪಿ. ರಮೇಶ, ಮಚೆಂದ್ರ, ಮಧು, ಹರೀಶ್ ಹಾಗೂ ಸ್ಥಳೀಯರು ಈ ಸೇವಾ ಕಾರ್ಯದಲ್ಲಿ ಸಹಕರಿಸಿದ್ದರು.


