ಕಾಸರಗೋಡು: ಮೊಗ್ರಾಲ್ ಕಡವತ್ ದಾರುಸ್ಸಲಾಮ್ ನಿವಾಸಿ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ, ಚಟ್ಟಂಚಾಲ್ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್‍ನ ಜನರಲ್ ಸೆಕ್ರಟರಿ ಯು.ಎಂ. ಅಬ್ದುರಹ್ಮಾನ್ ಮೌಲವಿ (86)ಸ್ವಗೃಹದಲ್ಲಿ ನಿಧನರಾದರು. ಕಳೆದ ಒಂದು ವಾರದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಸ್ವಗೃಹಕ್ಕೆ ಕರೆತರಲಾಗಿತ್ತು.
ಶಾಲಾ ಶಿಕ್ಷಣದ ನಂತರ, ಮೌಲವಿ ಫಾಝಿಲ್ ಬಾಖವಿ ವಿದ್ಯಾಭ್ಯಾಸ ಪಡೆದಿದ್ದರು. ಮಂಗಳೂರು ಪರಂಗಿಪೇಟೆ ಜುಮಾ ಮಸ್ಜಿದ್, ಮಂಗಳೂರು ಅಝ್ಹರಿಯ್ಯಾ ಕಾಲೇಜು, ಕರುವಂತುರುತ್ತಿ, ಪಡನ್ನ ಜುಮಾ ಮಸ್ಜಿದ್, ಕೊಂಡೋಟಿ ಪಳಯಂಗಾಡಿ ಜುಮಾ ಮಸ್ಜಿದ್, ವೆಲ್ಲೂರು ಬಾಖಿಯಾತುಸ್ಸ್ವಾಲಿಹಾತ್ ಮೊದಲಾದ ಸ್ಥಳಗಳಲ್ಲಿ ಧಾರ್ಮಿಕ ಅಧ್ಯಯನ ಪೂರೈಸಿದ್ದರು.
ಪ್ರಸಕ್ತ ಬದಿಯಡ್ಕ ಕಣ್ಣಿಯತ್ ಅಕಾಡೆಮಿ ಅಧ್ಯಕ್ಷ, ಚೆಮ್ಮಾಡ್ ದಾರುಲ್ ಇಸ್ಲಾಮಿಕ್ ಸರ್ವಕಲಾ ಶಾಲಾ ಸೆನೆಟ್ ಸದಸ್ಯ, ನೀಲೇಶ್ವರಂ ಮರ್ಕಝುದ್ದವಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಅವರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ. ಮೊಗ್ರಾಲ್ ಕಡಪ್ಪುರಂ ದೊಡ್ಡ ಜುಮಾ ಮಸ್ಜಿದ್ ಅಂಗಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.


