ಬದಿಯಡ್ಕ: ಪೆರ್ಮುಖ ಕನಕಪಾಡಿ ರಕ್ತೇಶ್ವರಿ, ನಾಗ, ಗುಳಿಗ ಕಟ್ಟೆಗಳ ಪ್ರತಿಷ್ಠಾ ಮಹೋತ್ಸವ ಇತ್ತೀಚೆಗೆ ನಡೆಯಿತು. ದೇವತಾ ಪ್ರಾರ್ಥನೆ, ಸುದರ್ಶನ ಹವನ, ಭಗವತೀ ಸೇವೆ, ಬಾಧಾಕರ್ಷಣೆ, ಉಚ್ಛಾಟನಾ ಕ್ರಿಯೆ, ಪ್ರಸಾದ ಭೋಜನ, ತಿಲ ಹವನ ಚಕ್ರಾಬ್ಜಪೂಜೆ, ದ್ವಾದಶಮೂರ್ತಿ ಬ್ರಾಹ್ಮಣ ಆರಾಧನೆ, ಮೊದಲಾದ ಕಾರ್ಯಕ್ರಮಗಳು ಜರಗಿದವು. ಬಳಿಕ
ರಾಕ್ಷೋಘ್ನ ಹವನ, ವಾಸ್ತು ಹವನ, ವಾಸ್ತು ಬಲಿ, ವಾಸ್ತು ಪುಣ್ಯಹ, ಶ್ರೀ ಮಹಾಗಣಪತಿ ಹವನ, ಕಲಶ ಪೂಜೆ, ಕನ್ಯಾಲಗ್ನ ಶುಭ ಮುಹೂರ್ತದಲ್ಲಿ ಶ್ರೀ ರಕ್ತೇಶ್ವರಿ, ನಾಗ ಹಾಗೂ ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ರಕ್ತೇಶ್ವರಿ ತಂಬಿಲ, ನಾಗತಂಬಿಲ, ಗುಳಿಗ ತಂಬಿಲ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.

.jpg)
