HEALTH TIPS

ಭಾರತೀಯ ಸಂಜಾತ ಅಮೆರಿಕದ ಸೈಬರ್ ಮುಖ್ಯಸ್ಥನಿಂದ ಪ್ರಮಾದ; ChatGPTಗೆ ಸೂಕ್ಷ್ಮ ಮಾಹಿತಿ ಅಪ್ಲೋಡ್!

ವಾಷಿಂಗ್ಟನ್: ಅಮೆರಿಕದ ಸೈಬರ್ ಏಜೆನ್ಸಿ ಮುಖ್ಯಸ್ಥ ಭಾರತೀಯ ಸಂಜಾತರಾದ ಮಧು ಗೊಟ್ಟುಮುಕ್ಕಲ ಅವರು ಸೈಬರ್ ಭದ್ರತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ChatGPTಗೆ ಅಪ್ಲೋಡ್ ಮಾಡಿರುವುದಾಗಿ ವರದಿಯಾಗಿದೆ.

ಪೊಲಿಟಿಕೊ ಮಾಧ್ಯಮದ ಪ್ರಕಾರ ಸೈಬರ್ ಭದ್ರತೆ ಮತ್ತು ಮೂಲಸೌಕರ್ಯ ಭದ್ರತಾ ಏಜೆನ್ಸಿಯ (CISA) ಹಾಲಿ ಮುಖ್ಯಸ್ಥರಾಗಿರುವ ಮಧು ಕಳೆದ ಬೇಸಗೆಯಲ್ಲಿ ತಮ್ಮ ಕಾರ್ಯ ವ್ಯಾಪ್ತಿಯೊಳಗೆ ಕಾಂಟ್ರಾಕ್ಟಿಂಗ್ (ಕಚ್ಚಾ ಮಾಹಿತಿ) ಮತ್ತು ಸೈಬರ್ ಭದ್ರತೆಗೆ ಸಂಬಂಧಿಸಿದ ವಿವರಗಳನ್ನು ಎಐ ವೇದಿಕೆಯಾದ ChatGPTಗೆ ಅಪ್ಲೋಡ್ ಮಾಡಿದ್ದರು. ಮಾಹಿತಿ ChatGPTಗೆ ಹಾಕಿದ ತಕ್ಷಣ ಸ್ವಯಂಚಾಲಿತವಾಗಿ ಭದ್ರತಾ ಎಚ್ಚರಿಕೆ ಹೋಗಿತ್ತು ಮತ್ತು ಪರಿಣಾಮವಾಗಿ ಆಂತರಿಕವಾಗಿ ವಿಚಾರಣೆಯೂ ನಡೆದಿದೆ ಎಂದು ವರದಿಯಾಗಿದೆ.

ದಾಖಲೆಯನ್ನು ಗೌಪ್ಯ ಎಂದು ವರ್ಗೀಕರಿಸಲಾಗಿರಲಿಲ್ಲ. ಆದರೆ "ಕಚೇರಿ ಬಳಕೆಗೆ ಮಾತ್ರ" ಎನ್ನುವ ಮಾಹಿತಿ ನೀಡಲಾಗಿತ್ತು. ಹೀಗಾಗಿ ಸಾರ್ವಜನಿಕವಾಗಿ ಪ್ರಕಟಿಸುವ ಅವಕಾಶವಿರಲಿಲ್ಲ. ಹೀಗೆ ಗೌಪ್ಯ ಮಾಹಿತಿಯನ್ನು ಬಹಿರಂಗ ವೇದಿಕೆಗಳಿಗೆ ಅಪ್ಲೋಡ್ ಮಾಡಿದ ತಕ್ಷಣ ಸುರಕ್ಷೆಗೆ ಸಂಬಂಧಿಸಿದ ಎಚ್ಚರಿಕೆಗಳು ಬರುತ್ತವೆ. ಸೂಕ್ಷ್ಮ ಮಾಹಿತಿಗಳು ಬಹಿರಂಗವಾಗದೆ ಇರಲು ಅಮೆರಿಕದಲ್ಲಿ ಇಂತಹ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪೊಲಿಟಿಕೊ ವರದಿ ಮಾಡಿದೆ.

ಮಧು ಗೊಟ್ಟುಮುಕ್ಕಲ ಯಾರು?

ಮಧು ಅವರು ಭಾರತೀಯ ಸಂಜಾತರಾಗಿದ್ದು, ಅತ್ಯಾಧುನಿಕ ಸೈಬರ್ ಬೆದರಿಕೆ, ರಷ್ಯಾ ಮತ್ತು ಚೀನಾಗೆ ಸಂಬಂಧಿತ ಸೇರಿದಂತೆ ಯಾವುದೇ ರಾಷ್ಟ್ರದ ಬೆಂಬಲಿತ ಸೈಬರ್ ಬೆದರಿಕೆಗಳಿಂದ ಫೆಡರಲ್ ನೆಟ್ವರ್ಕ್ ಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು.

ಮಧು ಅವರು ಡಕೋಟ ವಿಶ್ವವಿದ್ಯಾಲಯದಿಂದ ಇನ್ಫಾರ್ಮೇಶನ್ ಸಿಸ್ಟಮ್ಸ್ನಲ್ಲಿ ಪಿಎಚ್ಡಿ ಪದವೀಧರರು. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ನಿರ್ವಹಣೆಯಲ್ಲಿ ಡಲ್ಲಾಸ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಆಂಧ್ರ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ನಲ್ಲಿ ಬಿಇ ಪದವೀಧರರಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಆಗಸ್ಟ್ ನಲ್ಲಿ ಸರ್ಕಾರಿ ವ್ಯವಸ್ಥೆ ಅಥವಾ ಮೂಲಸೌಕರ್ಯಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗವಾಗಿದೆಯೇ ಎಂದು ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ವಿಭಾಗದ (DHS) ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ತನಿಖೆಯ ಫಲಿತಾಂಶವನ್ನು ಇನ್ನೂ ಬಹಿರಂಗಪಡಿಸಿಲ್ಲ.

ಬಹುತೇಕ DHS ಅಧಿಕಾರಿಗಳಿಗೆ ChatGPT ಬಳಸುವ ಅಧಿಕಾರವಿಲ್ಲದೆ ಇದ್ದರೂ, ಮಧು ಅವರಿಗೆ ಬಳಸಲು ಅವಕಾಶ ನೀಡಲಾಗಿತ್ತು. ಈ ಬಗ್ಗೆ CISA ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಧು ಅವರಿಗೆ ChatGPT ಬಳಕೆಗೆ ಅವಕಾಶವಿದೆ. ಅವರು ಅಲ್ಪಾವಧಿಗೆ ಮಿತಿಯೊಳಗೆ ಅದನ್ನು ಬಳಸುತ್ತಾರೆ ಎಂದು ತಿಳಿಸಿದೆ. "ಅವರು ಕೊನೆಯ ಬಾರಿ 2025 ಜುಲೈ ಮಧ್ಯಭಾಗದಲ್ಲಿ ChatGPT ಬಳಸಿದ್ದಾರೆ. ಅವರಿಗೆ ಅಧಿಕೃತವಾಗಿ ಬಳಕೆಗೆ ಅನುಮತಿ ನೀಡಲಾಗಿತ್ತು" ಎಂದು CISA ವಕ್ತಾರ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries