HEALTH TIPS

ಉಕ್ರೇನ್‍ನ 12 ಗ್ರಾಮಗಳನ್ನು ವಶಕ್ಕೆ ಪಡೆದುಕೊಂಡ ರಶ್ಯ: ವರದಿ

ಮಾಸ್ಕೋ: ಫೆಬ್ರವರಿಯಲ್ಲಿ ರಶ್ಯದ ಪಡೆಗಳು ಪೂರ್ವ ಉಕ್ರೇನ್‍ನ 12ಕ್ಕೂ ಹೆಚ್ಚು ಗ್ರಾಮಗಳನ್ನು ವಶಕ್ಕೆ ಪಡೆದಿರುವುದಾಗಿ ರಶ್ಯ ಸೇನಾಪಡೆಯ ಮುಖ್ಯಸ್ಥ ವ್ಯಾಲೆರಿ ಗೆರಸಿಮೋವ್ ರವಿವಾರ ಹೇಳಿದ್ದಾರೆ.

ತೀವ್ರ ಚಳಿಯ ಹೊರತಾಗಿಯೂ ಫೆಬ್ರವರಿ ತಿಂಗಳ ಎರಡು ವಾರದಲ್ಲೇ ನಮ್ಮ ಸಶಸ್ತ್ರ ಪಡೆಗಳು 12 ಗ್ರಾಮಗಳನ್ನು ಸ್ವತಂತ್ರಗೊಳಿಸಿವೆ ಎಂದು ಉಕ್ರೇನ್‍ನಿಂದ ವಶಕ್ಕೆ ಪಡೆದಿರುವ ಪ್ರದೇಶಕ್ಕೆ ಭೇಟಿ ನೀಡಿದ ಗೆರೆಸಿಮೋವ್ ಹೇಳಿದ್ದಾರೆ.

ರಶ್ಯದ ಪಡೆಗಳು ಕೈಗಾರಿಕಾ ಕೇಂದ್ರ ಸ್ಲೊವಿಯಾಂಸ್ಕ್‍ನತ್ತ ಮುನ್ನಡೆದಿದ್ದು ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿವೆ. ಈಶಾನ್ಯ ಸುಮಿ ಮತ್ತು ಖಾರ್ಕಿವ್ ಪ್ರದೇಶದ ಗಡಿ ಭಾಗಗಳಲ್ಲಿ ರಶ್ಯವು ಭದ್ರತಾ ವಲಯವನ್ನು ವಿಸ್ತರಿಸುತ್ತಿದ್ದು ಇಲ್ಲಿ ಕೆಲವು ಭಾಗಗಳ ಮೇಲೆ ಈಗಾಗಲೇ ನಿಯಂತ್ರಣ ಸಾಧಿಸಿವೆ. ನಿಪ್ರೊಪೆಟ್ರೋವ್ಸ್ಕ್ ಪ್ರಾಂತದ ದಿಕ್ಕಿನಲ್ಲಿ ಮುಂದಿನ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಗೆರಸಿಮೋವ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries