ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ವಿರಾಟ್ ಹಿಂದೂ ಸಮಾಜೋತ್ಸವ ಮಾರ್ಚ್ 1 ರಂದು ಭಾರತೀನಗರ ಬೋಳುಕಟ್ಟೆ ಮೈದಾನದಲ್ಲಿ ಜರಗಲಿದೆ. ಸಂಜೆ 4 ಗಂಟೆಯಿಂದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, 5 ರಿಂದ ಸಭಾ ಕಾರ್ಯಕ್ರಮ, ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಆಶೀರ್ವಚನ, ಭಾರತೀಯ ವಕೀಲರ ಪರಿಷತ್ ಕೇರಳ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಎ.ವಿ.ಕೇಶವನ್ ಅವರಿಂದ ದಿಕ್ಸೂಚಿ ಭಾಷಣ, ಸಂಜೆ 6.30ಕ್ಕೆ ಮೆಗಾ ತಿರುವಾದಿರ, 7.15 ರಿಂದ 8.30ರ ವರೆಗೆ ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಲಿದೆ.

