HEALTH TIPS

ಅಡ್ಕತ್ತಬೈಲ್ ಬ್ರಹ್ಮಬೈದರ್ಕಳ ಗರಡಿ ವಾರ್ಷಿಕೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ನಗರದ ಅಡ್ಕತ್ತಬೈಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪುನ:ಪ್ರತಿಷ್ಠಾ ವಾರ್ಷಿಕೋತ್ಸವ, ಬ್ರಹ್ಮ ಬಲಿ ಮತ್ತು ಬೈದರ್ಕಳ ನೇಮೋತ್ಸವ ಮಾ 31ರಿಂದ ಏ. 2ರ ವರೆಗೆ  ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು. 

ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಉತ್ಸವ ಸಮಿತಿ ರಚನಾ ಸಭೆ ಅಡ್ಕತ್ತಬೈಲು ಗರಡಿ ವಠಾರದಲ್ಲಿ ಜರುಗಿತು.  ಕಾಸರಗೋಡು ನಗರ ಸಭೆ 4ನೇ ಸದಸ್ಯ ಗುರು ಪ್ರಸಾದ್ ಅವರು 5ನೇ ವಾರ್ಡ್ ಸದಸ್ಯ ಹರೀಶ್ ಕೆ ಆರ್ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಉತ್ಸವ ಸಮಿತಿ ಪದಾಧಿಕರಿಗಳ ಯ್ಕೆ ನಡೆಯಿತು.   ರಕ್ಷಾಧಿಕಾರಿಯಾಗಿ ಶ್ರೀ ವಿಷ್ಣು ಪ್ರಕಾಶ್ ತಂತ್ರಿ ಅವರನ್ನು ಅಯ್ಕೆ ಮಾಡಲಾಯಿತು.  ಗೌರವಧ್ಯಕ್ಷರಾಗಿ ಭಾಸ್ಕರ ಸುವರ್ಣ ಗರಡಿ ಮನೆ  ಅಧ್ಯಕ್ಷರಾಗಿ ಎ ಪ್ರೇಮ್ ಜಿತ್  ಉಪಾಧ್ಯಕ್ಷರಾಗಿ ಮೋಹನ್ ದಾಸ್, ಚಂದ್ರಕಲಾ, ಪ್ರಧಾನ ಕಾರ್ಯದರ್ಶಿ ಹರಿಕಾಂತ್ ಕೆ, ಜತೆ ಕಾರ್ಯದರ್ಶಿಯಾಗಿ ಕಾರ್ತಿಕ್, ಕೋಶಾಧಿಕಾರಿಯಾಗಿ ದಯಾನಂದ ಪೂಜಾರಿ, ಸ್ವಾಗತ ಸಮಿತಿಯಲ್ಲಿ ರಘು ಮೀಪುಗುರಿ, ಗುರುಪ್ರಸಾದ್ ಪ್ರಭು, ಕಮಲಾಕ್ಷ ಸುವರ್ಣ, ಶಿವ ಕೆ, ಪ್ರಚಾರ ಸಮಿತಿಯಲ್ಲಿ ಪುರುಷೋತಮ್ ನಾಯ್ಕ್, ದೀಕ್ಷಿತ್, ಕಾರ್ತಿಕ್, ಹಾಗೂ ಇತರ ಉಪಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. 

ಸಮಾರಂಭದಲ್ಲಿ ಕಾಳ್ಯಂಗಾಡ್ ಶ್ರೀ ಮೂಕಾಂಬಿಕಾ ಕ್ಷೇತ್ರದ ಆಡಳಿತ ಮೊಕ್ತೆಸರ ಅಚ್ಚುತ ಪೂಜಾರಿ, ಹೊಸತಾಗಿ ಆಯ್ಕೆಯಾದ ನಗರ ಸಭಾ ಸದಸ್ಯರಾದ ಗುರು ಪ್ರಸಾದ್ ಪ್ರಭು, ಹರೀಶ್ ಕೆ ಆರ್ ಇವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಮಹೇಶ್ ಎ, ಮಚ್ಚೇಂದ್ರ, ನವೀನ್ ಪೂಜಾರಿ, ಉಮೇಶ್, ವೇಣುಗೋಪಾಲ, ಹರಿಪ್ರಸಾದ್, ಕೆ ವಿ ಸತ್ಯನಾರಾಯಣ ರಾವ್, ಪ್ರವೀಣ್ ಕುಮಾರ್, ಸುಜಯ ಶೆಟ್ಟ, ಪದ್ಮಾವತಿ, ಜಯಶ್ರೀ ಅಶೋಕ  ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries