HEALTH TIPS

ಅಲ್ಮಾಹಿರ್ ಅರೇಬಿಕ್ ಸ್ಕಾಲರ್ಶಿಪ್ ಪರೀಕ್ಷೆ-ಕುಂಬಳೆ ಉಪಜಿಲ್ಲೆಯಲ್ಲಿ 226 ವಿದ್ಯಾರ್ಥಿಗಳು ಭಾಗಿ

ಬದಿಯಡ್ಕ: ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಅರಬಿಕ್ ಭಾಷೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಅಲ್ ಮಾಹಿರ್ ಅರಬಿಕ್ ಸ್ಕಾಲರ್‍ಶಿಪ್ ಪರೀಕ್ಷೆಯನ್ನು ಕುಂಬಳ ಉಪಜಿಲ್ಲೆಯಲ್ಲಿ ಮೂರು ಕೇಂದ್ರಗಳಲ್ಲಿ ನಡೆಸಲಾಯಿತು. ಒಟ್ಟು 226 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜಿ.ಎಸ್.ಬಿ.ಎಸ್. ಕುಂಬಳೆ, ಬಿಆರ್‍ಸಿ ಹಾಲ್ ಬದಿಯಡ್ಕ ಹಾಗೂ ಜಿಎಚ್‍ಎಸ್ ಆದೂರು ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. 

ಜನವರಿ 12 ರಂದು ಶಾಲಾ ಮಟ್ಟದ ಟ್ಯಾಲೆಂಟ್ ಟೆಸ್ಟ್‍ಗಳು ನಡೆದಿದ್ದು, ಶಾಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಒಳಗೊಂಡು ಉಪಜಿಲ್ಲಾ ಮಟ್ಟದಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಯಿತು. ಅರಬಿಕ್ ಅಕಾಡೆಮಿಕ್ ಕಾಂಪ್ಲೆಕ್ಸ್‍ನ ಅಧೀನದಲ್ಲಿ ನಡೆಯುವ ಈ ಸ್ಪರ್ಧಾತ್ಮಕ ಪರೀಕ್ಷೆಯ ಸುಗಮವಾದ ನಿರ್ವಹಣೆಗೆ ಇನ್ವಿಜಿಲೇಟರ್‍ಗಳ ಜೊತೆಗೆ ಪ್ರತಿಯೊಂದು ಕೇಂದ್ರದಲ್ಲೂ ಸಂಯೋಜಕರನ್ನು ನೇಮಿಸಲಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries