ಈ ಸಂಬಂಧ 2021ರ ಮಾಹಿತಿ ತಂತ್ರಜ್ಞಾನ (ಇಂಟರ್‌ಮೀಡಿಯರಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿದ್ದುಪಡಿಗಳನ್ನು ತಂದಿದೆ. ಪರಿಷ್ಕೃತ ನಿಯಮಾವಳಿಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗುವ ವಿಷಯಕ್ಕೆ ಮೊದಲ ಬಾರಿಗೆ ಔಪಚಾರಿಕ ವ್ಯಾಖ್ಯಾನ ನೀಡಿವೆ.
ನೂತನ ನಿಯಮಾವಳಿಗಳು ಫೆಬ್ರವರಿ 20ರಂದು ಜಾರಿಗೆ ಬರಲಿವೆ.
ನೂತನ ನಿಯಮಾವಳಿಗಳ ಪ್ರಕಾರ, ಕೃತಕ ಬುದ್ಧಿಮತ್ತೆಯನ್ನು ಬಳಸಿ ನೈಜವೆಂಬಂತೆ ಕಂಡುಬರುವಂತೆ ಸೃಷ್ಟಿಸಲಾಗುವ ದೃಶ್ಯ, ಶ್ರಾವ್ಯ ಅಥವಾ ದೃಶ್ಯ-ಶ್ರಾವ್ಯ ವಿಷಯಗಳನ್ನು 'ಸಿಂಥೆಟಿಕ್' (ಕೃತಕ ಬುದ್ಧಿಮತ್ತೆ ಆಧಾರಿತ, ಮನುಷ್ಯ ನಿರ್ಮಿತವಲ್ಲ) ಎಂದು ವರ್ಗೀಕರಿಸಲಾಗುವುದು.
ನೂತನ ನಿಯಮಾವಳಿಗಳು ವಿಷಯಗಳನ್ನು ಆನ್‌ಲೈನ್ ವೇದಿಕೆಗಳಿಂದ ತೆಗೆಯುವ ಅವಧಿಯನ್ನು 36 ಗಂಟೆಗಳಿಂದ ಕೇವಲ ಮೂರು ಗಂಟೆಗಳಿಗೆ ಇಳಿಸಿವೆ.
ಕೃತಕ ಬುದ್ಧಿಮತ್ತೆ ನಿರ್ಮಿತ ವಿಷಯಗಳ ನಿರ್ಮಾಣ ಅಥವಾ ಹಂಚಿಕೆಯಲ್ಲಿ ತೊಡಗಿರುವ ಮಾಧ್ಯಮಗಳು ಅದನ್ನು ಲೇಬಲ್ ಮೂಲಕ ಸ್ಪಷ್ಟವಾಗಿ ತಿಳಿಸಬೇಕು ಎಂದು ಅವು ಹೇಳುತ್ತವೆ.

