ಕಳೆದ ವರ್ಷದ ಡಿಸೆಂಬರ್ 19ರಿಂದ 21ರವರೆಗೆ ಗುವಾಹಟಿಯಲ್ಲಿ ಸಂಸ್ಥೆಯ ನಿರ್ದೇಶಕ ರಾಹುಲ್ ನವೀನ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಈ.ಡಿ.ಯ 34ನೇ ವಲಯಾಧಿಕಾರಿಗಳ ತ್ರೈಮಾಸಿಕ ಸಮ್ಮೇಳನದಲ್ಲಿ ಈ ಕ್ರಮಗಳನ್ನು ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.
ಈ.ಡಿ.ಕಳೆದ ವರ್ಷದಿಂದ ದಿಲ್ಲಿಯ ಹೊರಗೆ ಈ ತ್ರೈಮಾಸಿಕ ಸಮ್ಮೇಳನಗಳನ್ನು ನಡೆಸುತ್ತಿದೆ. ಹಿಂದಿನ ಎರಡು ಸಮ್ಮೇಳನಗಳು ಗುಜರಾತಿನ ಕೇವಡಿಯಾ ಮತ್ತು ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ನಡೆದಿದ್ದವು.
ಈಶಾನ್ಯ ಭಾರತದಲ್ಲಿ ಸಮ್ಮೇಳನವನ್ನು ನಡೆಸುವ ನಿರ್ಧಾರವು ಈ ಪ್ರದೇಶದ ವ್ಯೆಹಾತ್ಮಕ ಮತ್ತು ಕಾರ್ಯಾಚರಣೆ ಪ್ರಾಮುಖ್ಯವನ್ನು ಈ.ಡಿ.ಗುರುತಿಸಿದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿರುವ ಈ.ಡಿ.,ಇದು ಪ್ರಸಕ್ತ ವಿತ್ತವರ್ಷದ ಕೊನೆಯ ತ್ರೈಮಾಸಿಕ ಸಭೆಯಾಗಿದ್ದರಿಂದ ಮಹತ್ವದ್ದಾಗಿತ್ತು. ಗುರಿಗಳ ಅರ್ಥಪೂರ್ಣ ಸಾಧನೆ,ತನಿಖೆಗಳ ತಾರ್ಕಿಕ ಮುಕ್ತಾಯ,ಸಕಾಲದಲ್ಲಿ ಪ್ರಾಸಿಕ್ಯೂಷನ್ ದೂರುಗಳ ಸಲ್ಲಿಕೆ ಮತ್ತು ಜಪ್ತಿಗಳು ಹಾಗೂ ದಂಡಗಳು ಕಾನೂನುಬದ್ಧವಾಗಿರುವಂತೆ ಮತ್ತು ಕಾರ್ಯಗತಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.

