ಗುರುವಾರ ಲೋಕಸಭೆಯಲ್ಲಿ ಎರಡು ಪ್ರತ್ಯೇಕ ಪ್ರಶ್ನೆಗಳಿಗೆ ನೀಡಿದ ಲಿಖಿತ ಉತ್ತರಗಳಲ್ಲಿ ಸಚಿವರು ಈ ಮಾಹಿತಿಯನ್ನು ಒದಗಿಸಿದರು.
ಡಿಸೆಂಬರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಇಂಡಿಗೋ ಯಾನಗಳ ರದ್ದತಿಗೆ ಕಾರಣವಾಗಿದ್ದ ಅಡಚಣೆಗಳ ಕುರಿತಂತೆ ಸಚಿವರು,ನಿಯಂತ್ರಣಾತ್ಮಕ ಸಿದ್ಧತೆಯ ಕೊರತೆ, ಸಾಫ್ಟ್‌ವೇರ್ ಸಿಸ್ಟಮ್ ದೋಷಗಳು ಮತ್ತು ಕಾರ್ಯಾಚರಣೆ ನಿಯಂತ್ರಣದಲ್ಲಿಯ ಲೋಪಗಳು ಪ್ರಮುಖ ಕಾರಣಗಳಾಗಿದ್ದವು ಎಂದು ತಿಳಿಸಿದರು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳೂ ಯಾನಗಳ ರದ್ದತಿಗೆ ಕೊಡುಗೆಯನ್ನು ನೀಡಿದ್ದವು ಎಂದರು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ),ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ (ಡಿಜಿಸಿಎ),ನಾಗರಿಕ ವಾಯುಯಾನ ಭದ್ರತಾ ಘಟಕ (ಬಿಸಿಎಎಸ್) ಮತ್ತು ಭಾರತೀಯ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ(ಎಇಆರ್‌ಎ) ಸೇರಿದಂತೆ ಪ್ರಮುಖ ವೈಮಾನಿಕ ಸಂಸ್ಥೆಗಳಲ್ಲಿ 2,645ಕ್ಕೂ ಹುದ್ದೆಗಳು ಖಾಲಿಯಿದ್ದು, ಇವುಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೊಹೋಲ್ ತಿಳಿಸಿದರು.

