ಕೋಲ್ಕತ್ತ : ಐಐಟಿ ಖರಗಪುರದಲ್ಲಿ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಮೆಡಿಕಲ್ ಫಿಸಿಕ್ಸ್ (ವೈದ್ಯಕೀಯ ಭೌತವಿಜ್ಞಾನ) ವಿಷಯಗಳ ಎಂಎಸ್‌ಸಿ ಕೋರ್ಸ್ ಪ್ರಾರಂಭಿಸಲು, ವೇರಿಯಬಲ್ ಎನರ್ಜಿ ಸೈಕ್ಲೋಟ್ರೋನ್ ಸೆಂಟರ್ ಮತ್ತು ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ (ಸಿಎನ್‌ಸಿಐ) ಜೊತೆಗೆ ಖರಗಪುರ ಐಐಟಿಯು ಒಪ್ಪಂದ ಮಾಡಿಕೊಂಡಿದೆ.
ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಮೆಡಿಕಲ್ ಫಿಸಿಕ್ಸ್ ವಿಷಯದಲ್ಲಿ ರಾಷ್ಟ್ರದ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಐಐಟಿಯ ವಕ್ತಾರ ಶನಿವಾರ ತಿಳಿಸಿದರು.
ಐಐಟಿ ಖರಗಪುರ, ಸಿಎನ್‌ಸಿಐ ಮತ್ತು ವಿಇಸಿಸಿ ಸಹಯೋಗದಲ್ಲಿ ಎಂಎಸ್‌ಸಿ ಕೋರ್ಸ್ ಆರಂಭಿಸಲಾಗುತ್ತದೆ. ಜಂಟಿ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. 2016-27ನೇ ಶೈಕ್ಷಣಿಕ ವರ್ಷದಿಂದಲೇ ಹೊಸ ಕೋರ್ಸ್ ಆರಂಭವಾಗಲಿದೆ ಎಂದು ತಿಳಿಸಿದರು.

