ಆದರೆ ಅಮೆರಿಕದ ಇತರ ಕೃಷಿ ಉತ್ಪನ್ನಗಳಿಗೆ ಸುಂಕಗಳನ್ನು ತೆಗೆದು ಹಾಕುವ ಅಥವಾ ಕಡಿಮೆ ಮಾಡುವ ಮೂಲಕ ಹೆಚ್ಚಿನ ಮಾರುಕಟ್ಟೆಯ ಪ್ರವೇಶವನ್ನು ಒದಗಿಸಿದೆ. ಡಿಸ್ಟಿಲರ್ಸ್ ಡ್ರೈಡ್ ಗ್ರೈನ್ಸ್ ವಿತ್ ಸೊಲ್ಯುಬಲ್ಸ್ (DDGS), ಸೋಯಾಬೀನ್ ಎಣ್ಣೆ, ಪಶು ಆಹಾರಕ್ಕಾಗಿ ರೆಡ್ ಸೋರ್ಗಮ್, ಮರದ ಬೀಜಗಳು, ತಾಜಾ ಮತ್ತು ಸಂಸ್ಕರಿತ ಹಣ್ಣುಗಳು, ವೈನ್ ಮತ್ತು ಸ್ಪಿರಿಟ್ಗಳು ಮತ್ತು 'ಹೆಚ್ಚುವರಿ ಉತ್ಪನ್ನಗಳಿಗೆ" ತನ್ನ ಮಾರುಕಟ್ಟೆಯನ್ನು ತೆರೆದಿದೆ.
ಇವು ಮೇಲ್ನೋಟಕ್ಕೆ ಭಾರತೀಯ ರೈತರ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಈ ಉತ್ಪನ್ನಗಳಿಗೆ ದೇಸಿ ಇಳುವರಿ ಕಡಿಮೆ ಇದೆ. ಆದರೆ ಇದು ಅಷ್ಟು ಸರಳವಾದ ವಿಷಯವಲ್ಲ. ಮೊತ್ತ ಮೊದಲಿಗೆ 'ಹೆಚ್ಚುವರಿ ಉತ್ಪನ್ನಗಳು' ಎನ್ನುವುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ.
ಇನ್ನು DDGS ವಿಚಾರಕ್ಕೆ ಬಂದಲ್ಲಿ, ಇದು ಮೂಲತಃ ಜೋಳ ಮತ್ತು ಇತರ ಏಕದಳ ಧಾನ್ಯಗಳಿಂದ ಉತ್ಪಾದಿಸಿದ ಎಥೆನಾಲ್ ನ ಉಪ ಉತ್ಪನ್ನವಾಗಿದೆ. ಜೋಳ ಅಥವಾ ಅಕ್ಕಿಯಲ್ಲಿ ಪಿಷ್ಟದ ಹುದುಗುವಿಕೆಯಿಂದ ಎಥೆನಾಲ್ ಅನ್ನು ಉತ್ಪತ್ತಿಸಿದ ನಂತರ ಬಟ್ಟಿ ಇಳಿಸುವಿಕೆಯ ಮೂಲಕ ಬೇರ್ಪಡಿಸಿ ಉಳಿದ ತೇವಾಂಶದ ಧಾನ್ಯದ ಮ್ಯಾಷ್ ಅನ್ನು ಇನ್ನಷ್ಟು ಒಣಗಿಸಲಾಗುತ್ತದೆ. ಹಾಗೆ ದೊರೆಯುವ DDGS ಒಂದು ಪ್ರೊಟೀನ್ ಸಮೃದ್ಧವಾಗಿರುವ ವಸ್ತುವಾಗಿದೆ. ಇದು ವಸ್ತುಶಃ ಕಡಿಮೆ ವೆಚ್ಚದ ಪರ್ಯಾಯ ಪಶು ಆಹಾರವಾಗಿದೆ.
ಭಾರತದ ಕೋಳಿ, ದನ ಮತ್ತು ಜಲಚರ ಜೀವಿಗಳಿಗೆ ಆಹಾರ ತಯಾರಕರು ಸಾಮಾನ್ಯವಾಗಿ ಬಳಸುವ ಪ್ರೊಟೀನ್ ಮೂಲವೆಂದರೆ ಸೋಯಾಬೀನ್, ಹತ್ತಿಬೀಜ, ನೆಲಗಡಲೆ, ಸಾಸಿವೆ ಅಥವಾ ಅಕ್ಕಿ ಹೊಟ್ಟುಗಳಿಂದ ಎಣ್ಣೆಯನ್ನು ಹೊರತೆಗೆದ ನಂತರ ಪಡೆದ ಉಳಿದ ಎಣ್ಣೆ ತೆಗೆದ ನಂತರ ಉಳಿದ ಶೇಷ. ಇವು DDGSಗಿಂತ ಹೆಚ್ಚು ದುಬಾರಿಯಾಗಿವೆ.
ಭಾರತದಲ್ಲಿ ಎಣ್ಣೆಬೀಜ ಸಂಸ್ಕರಣಾಗಾರರು ಪ್ರಸ್ತುತ ಶೇ 46 ಪ್ರೊಟೀನ್ ಹೊಂದಿರುವ ಸೋಯಾಬೀನ್ DOC ಅನ್ನು ಪ್ರತಿ ಕೆಜಿಗೆ 43-44 ರೂ. ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಶೇ 42ರಷ್ಟು ಪ್ರೊಟೀನ್ ಕಂಟೆಂಟ್ ಹೊಂದಿರುವ ಅಕ್ಕಿಯಿಂದ ತಯಾರಿಸಿದ DDGS ಯನ್ನು ಪ್ರತಿ ಕೆಜಿಗೆ 30 ರೂ.ನಂತೆ ಮಾರಲಾಗುತ್ತದೆ. ಜೋಳದ DDGS ಯಲ್ಲಿ ಶೇ 27ರಷ್ಟು ಪ್ರೊಟೀನ್ ಇದ್ದು, ಪ್ರತಿ ಕೆಜಿಗೆ ರೂ 24-24.5ಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ ಪ್ರೊಟೀನ್ ಕಂಟೆಂಟ್ ಹೊಂದಿಸಿದ ಬಳಿಕವೂ DDGS ಸೋಯಾಬೀನ್ ಆಹಾರಕ್ಕಿಂತ ಹೆಚ್ಚು ಅಗ್ಗವಾಗಿ ದೊರೆಯಲಿದೆ. ಅಮೆರಿಕದಿಂದ ಆಮದು ಮಾಡಿಕೊಂಡರೆ ಇನ್ನಷ್ಟು ಅಗ್ಗವಾಗಿ ದೊರೆಯಲಿದೆ.
ಅಮೆರಿಕವು ಜಗತ್ತಿನಲ್ಲೇ ಅತಿ ಹೆಚ್ಚು ಜೋಳ ಮತ್ತು ಎಥೆನಾಲ್ ಉತ್ಪಾದಕ ಮತ್ತು ರಫ್ತು ರಾಷ್ಟ್ರವಾಗಿದೆ. ಮತ್ತು DDGS ಅನ್ನು ಈ ಆಹಾರ ಧಾನ್ಯದಿಂದಲೇ ತಯಾರಿಸಲಾಗುತ್ತದೆ. ಭಾರತ ಅಮೆರಿಕನ್ ಜೋಳ ಮತ್ತು ಎಥೆನಾಲ್ ಇಂಧನವಾಗಿ ಬಳಕೆಗೆ ಆಮದನ್ನು ನಿರಾಕರಿಸಿದ್ದರೂ, DDGS ಅನ್ನು ಅಮೆರಿಕದಿಂದ ಭಾರತಕ್ಕೆ ಬರಲು ಬಾಗಿಲು ತೆರೆದಿದೆ.
ಭಾರತದ ಪಶು ಆಹಾರ ಉತ್ಪಾದಕ ಸಂಘಟನೆಯ (CLFMA) ಅಧ್ಯಕ್ಷರಾಗಿರುವ ದಿವ್ಯಾ ಕುಮಾರ್ ಗುಲಾಟಿ ಪ್ರಕಾರ, "ಭಾರತೀಯ ಡಿಸ್ಟಿಲರಿಗಳಿಂದ ಬರುವ ಮೆಕ್ಕೆ ಜೋಳದ DDGS ಪ್ರತಿ ಬಿಲಿಯನ್ಗೆ 100-200 ಭಾಗಗಳಷ್ಟು ಅಫ್ಲಾಟಾಕ್ಸಿನ್ಗಳನ್ನು (ಧಾನ್ಯದ ಮೇಲೆ ಬೆಳೆಯುವ ಕೆಲವು ಶಿಲೀಂಧ್ರ ಮೌಲ್ಡ್ಗಳಿಂದ ಉತ್ಪತ್ತಿಯಾಗುತ್ತದೆ) ಹೊಂದಿದ್ದು, ಇದು ಬ್ರಾಯ್ಲರ್ ಕೋಳಿಗಳು ಮತ್ತು ಹೈನುಗಾರಿಕಾ ಪಶು ಆಹಾರ ಪದಾರ್ಥವಾಗಿ ಸೂಕ್ತವಲ್ಲ. ಮೊಟ್ಟೆ ಕೋಳಿ ಎಂದು ಕರೆಯುವ ಕೋಳಿಗಳಿಗೆ ಆಹಾರವಾಗಿ ಬಳಸಬಹುದು. ಅಮೆರಿಕದಿಂದ ಆಮದಾಗುವ DDGS ಜೋಳ ಪ್ರತಿ ಬಿಲಿಯನ್ಗೆ 20 ಭಾಗಗಳಿಗಿಂತ ಕಡಿಮೆಯಿದೆ. ಇದು ಅಫ್ಲಾಟಾಕ್ಸಿನ್ಗಳಿಗೆ ಸಾಮಾನ್ಯವಾಗಿ ಅಂಗೀಕರಿಸಲಾದ ನಿಯಂತ್ರಕ ಸುರಕ್ಷತಾ ಮಿತಿ."
ವಿವರಿಸಿ ಹೇಳುವುದಾದರೆ, ಬಾರತೀಯ ಕೋಳಿಸಾಕಣೆ, ಹೈನುಗಾರಿಕೆ ಮತ್ತು ಜಲಚರ ಉದ್ಯಮಕ್ಕೆ ಅಗ್ಗದ ಮತ್ತು ಉತ್ತಮ ಗುಣಮಟ್ಟದ ಪಶುಆಹಾರ ದೊರೆಯಲಿದೆ. ಆದರೆ ಈ DDGS ತಳೀಯವಾಗಿ ಮಾರ್ಪಡಿಸಿದ ಜೋಳದಿಂದ ತಯಾರಾಗುತ್ತದೆ ಎನ್ನುವುದು ಮತ್ತೊಂದು ವಿಚಾರ. 2024ರಲ್ಲಿ ಅಮೆರಿಕ 3.1 ಶತಕೋಟಿ ಡಾಲರ್ ಮೌಲ್ಯದ 12.2 ದಶಲಕ್ಷ ಟನ್ಗಳಷ್ಟು DDGS ಅನ್ನು ರಫ್ತು ಮಾಡಿದೆ. ಮಾತ್ರವಲ್ಲದೆ, 4.3 ಶತಕೋಟಿ ಡಾಲರ್ ಮೌಲ್ಯದ 1.91 ಶತಕೋಟಿ ಗ್ಯಾಲನ್ಗಳಷ್ಟು ಎಥೆನಾಲ್ ಮತ್ತು 13.7 ಶತಕೋಟಿ ಡಾಲರ್ ಮೌಲ್ಯದ 61.7 ದಶಲಕ್ಷ ಟನ್ಗಳಷ್ಟು ಜೋಳವನ್ನು ರಫ್ತು ಮಾಡಿದೆ.
ರೆಡ್ ಸೋರ್ಗಮ್ (ನವಣೆ) ಆಮದಿನ ಮೇಲೆ ಸುಂಕವನ್ನು ಕಡಿಮೆಗೊಳಿಸಲಾಗಿದೆ ಅಥವಾ ಶೂನ್ಯ ಸುಂಕ ವಿಧಿಸಲಾಗಿದೆ. ಇದರಿಂದಲೂ ಭಾರತದ ಪಶು ಆಹಾರದ ವಲಯವು ಲಾಭ ಪಡೆಯಬಹುದು. ಅಮೆರಿಕ ವಿಶ್ವದ ಅತಿದೊಡ್ಡ ನವಣೆ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿದೆ.
ಭಾರತ ಮತ್ತು ಅಮೆರಿಕದ ಒಪ್ಪಂದದ ಚೌಕಾಸಿಯಲ್ಲಿ ಭಾರತೀಯ ಸೋಯಾಬೀನ್ ರೈತರು ಮತ್ತು ಸಂಸ್ಕರಣ ಉದ್ಯಮಕ್ಕೆ ಪ್ರಮುಖ ನಷ್ಟವಾಗಿದೆ. ಸ್ಥಳೀಯ ಎಥೆನಾಲ್ ಧಾನ್ಯ ಆಧರಿತ ಡಿಸ್ಟಿಲರಿಗಳು ಮೆಕ್ಕೆಜೋಳ ಮತ್ತು ಅಕ್ಕಿಯಿಂದ DDGS ಅನ್ನು ಉಪ ಉತ್ಪನ್ನವಾಗಿ ಮಾರಾಟ ಮಾಡುತ್ತವೆ, ಸಂಸ್ಕರಿಸಿದ ಪ್ರತಿ 100 ಕೆಜಿ ಸೋಯಾಬೀನ್ ಸುಮಾರು 18 ಕೇಜಿ ಎಣ್ಣೆ ಮತ್ತು 82 ಕೇಜಿ DOC ಅನ್ನು ನೀಡುತ್ತದೆ. ಅಮೆರಿಕದ ಜೊತೆಗೆ ವ್ಯಾಪಾರ ಒಪ್ಪಂದದಿಂದ DDGS ಮತ್ತು ಕಡಿಮೆ ಸುಂಕದ ಸೋಯಾಬೀನ್ ಎಣ್ಣೆ ಆಮದಿಗೆ ಅವಕಾಶವಾಗಿದೆ. ಮುಖ್ಯವಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ 13 ದಶಲಕ್ಷ ಹೆಕ್ಟೇರ್ಗಳಲ್ಲಿ ದ್ವಿದಳ ಧಾನ್ಯದ ಎಣ್ಣೆ ಬೀಜವನ್ನು ಬೆಳೆಯುವ ರೈತರಿಗೆ ಹಾನಿಯಾಗಬಹುದು.
ಕಚ್ಚಾ ಸೋಯಾಬೀನ್ ಎಣ್ಣೆಯ ಮೇಲೆ ಆಮದು ಸುಂಕ ಈಗ ಶೇ 16.5ರಷ್ಟಿದೆ. ಭಾರತ 2024-25ರಲ್ಲಿ ಅರ್ಜೆಂಟಿನಾದಿಂದ 4.8 ಮಿಲಿಯನ್ ಟನ್, ಬ್ರೆಝಿಲ್ ನಿಂದ 1.1 ಮಿಲಿಯನ್ ಟನ್, ರಷ್ಯಾದಿಂದ 0.4 ಮಿಲಿಯನ್ ಟನ್ ಮತ್ತು ಅಮೆರಿಕದಿಂದ 0.2 ಮಿಲಿಯನ್ ಟನ್ ಸೋಯಾಬೀನ್ ಎಣ್ಣೆಯನ್ನು ಭಾರತ ಆಮದು ಮಾಡಿಕೊಂಡಿದೆ. ಇದೀಗ ಅಮೆರಿಕದಿಮದ ಸುಂಕರಹಿತವಾಗಿ ಬರುವ ಎಣ್ಣೆ ಮಾರುಕಟ್ಟೆಯನ್ನು ಆಕರ್ಷಿಸುವ ಸಾಧ್ಯತೆಯಿದೆ. DDGS ರೂಪದಲ್ಲಿ ಜೋಳ ಮತ್ತು ಸೋಯಾಬೀನ್ನ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಗಳನ್ನು ಪ್ರವೇಶಿಸಲಿವೆ.
ಭಾರತ ಒಣಹಣ್ಣುಗಳನ್ನು ಹೆಚ್ಚು ಉತ್ಪಾದಿಸದ ರಾಷ್ಟ್ರವಾಗಿರುವ ಕಾರಣದಿಂದ ವಾಲ್ನಟ್, ಬಾದಾಮಿ ಮತ್ತು ಪಿಸ್ತಾ ಮೇಲೆ ಆಮದು ಸುಂಕ ಕಡಿತದಿಂದ ಭಾರತೀಯ ರೈತರ ಮೇಲೆ ಹೆಚ್ಚು ಪರಿಣಾಮ ಬೀರದೆ ಇರಬಹುದು. ಅಮೆರಿಕದ ಮರದ ಕಡಲೆಗಳನ್ನು ಭಾರತ ಅತಿಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಸುಂಕ ಕಡಿತದಿಂದ ಬೆಲೆ ತಗ್ಗಬಹುದು.

