HEALTH TIPS

UPSC ನಾಗರಿಕ ಸೇವಾ ಪರೀಕ್ಷೆ; 933 ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (UPSC) 2026ರ ನಾಗರಿಕ ಸೇವಾ ಪರೀಕ್ಷೆ (CSE) ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆಗಳಿಗೆ (IFS) ಅಧಿಸೂಚನೆ ಹೊರಡಿಸಿದೆ.

ಒಟ್ಟು 933 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 24 ಕೊನೆಯ ದಿನಾಂಕ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯೋಮಿತಿ ಸಡಿಲಿಕೆ, ಪ್ರಯತ್ನಗಳ ಸಂಖ್ಯೆ ಮತ್ತು ಅರ್ಜಿ ಶುಲ್ಕದ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ. ಆಸಕ್ತರು ಈ ಮುಂದಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು: https://upsconline.nic.in/

ಪ್ರಮುಖ ದಿನಾಂಕಗಳು

• ಅಧಿಸೂಚನೆ ದಿನಾಂಕ: 04 ಫೆಬ್ರವರಿ 2026

• ಆನ್ಲೈನ್ ಅರ್ಜಿ ಆರಂಭ: 04 ಫೆಬ್ರವರಿ 2026

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಫೆಬ್ರವರಿ 2026

• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 24 ಫೆಬ್ರವರಿ 2026

• ಪರೀಕ್ಷೆ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.

• ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು

• ಫಲಿತಾಂಶದ ದಿನ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.

• ವಿವರಗಳಿಗೆ ಅಭ್ಯರ್ಥಿಗಳು UPSC ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು.

ಹುದ್ದೆಗಳ ವಿತರಣೆ ಮತ್ತು ಮೀಸಲಾತಿ

ಈ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಘೋಷಿಸಲಾದ 933 ಹುದ್ದೆಗಳಲ್ಲಿ ಸುಮಾರು 35 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ವಿವಿಧ ಕೇಂದ್ರ ಸೇವೆಗಳು ಮತ್ತು ಇಲಾಖೆಗಳಲ್ಲಿ ಅಧಿಕಾರಿ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ಮೀಸಲಾತಿ ಸಂಬಂಧಿತ ಎಲ್ಲಾ ಸೌಲಭ್ಯಗಳನ್ನು ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಅನ್ವಯಿಸಲಾಗುತ್ತದೆ.

ಅರ್ಹತೆ ಮತ್ತು ವಯೋಮಿತಿ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಸಹ ಪ್ರಾಥಮಿಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಯಸ್ಸಿನ ಮಿತಿಯನ್ನು 2026ರ ಆಗಸ್ಟ್ 1ರ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯವಾಗಿ ವಯೋಮಿತಿ 21 ರಿಂದ 32 ವರ್ಷಗಳವರೆಗೆ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ದೊರೆಯುತ್ತದೆಯಾದರೆ, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಪ್ರಯತ್ನಗಳ ಗರಿಷ್ಠ ಸಂಖ್ಯೆ

UPSC ನಾಗರಿಕ ಸೇವಾ ಪರೀಕ್ಷೆಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗರಿಷ್ಠ ಆರು ಬಾರಿ ಪ್ರಯತ್ನಿಸಬಹುದು. ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಒಂಬತ್ತು ಪ್ರಯತ್ನಗಳಿಗೆ ಅವಕಾಶವಿದೆ. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಪ್ರಯತ್ನಗಳ ಸಂಖ್ಯೆಗೆ ಮಿತಿ ವಿಧಿಸಲಾಗಿಲ್ಲ; ಆದರೆ ಅವರು ನಿಗದಿತ ವಯೋಮಿತಿಯೊಳಗೆ ಇರಬೇಕು.

OTR ಮತ್ತು ಅರ್ಜಿ ಶುಲ್ಕ

ಜನರಲ್/ಒಬಿಸಿ/ಇಡಬ್ಲ್ಯುಎಸ್: 100 ರೂ.

ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ: ವಿನಾಯಿತಿ ನೀಡಲಾಗಿದೆ

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.

ಈ ಬಾರಿ ಅರ್ಜಿ ಸಲ್ಲಿಸಲು ಒಂದು ಬಾರಿ ನೋಂದಣಿ (One Time Registration - OTR) ಕಡ್ಡಾಯವಾಗಿದೆ. ಅಭ್ಯರ್ಥಿಗಳು ಮೊದಲು OTR ಪ್ರೊಫೈಲ್ ರಚಿಸಿ, ನಂತರವೇ ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಬೇಕು. ಅಪ್‌ಲೋಡ್ ಮಾಡುವ ಫೋಟೋ ಇತ್ತೀಚಿನದಾಗಿರಬೇಕು ಮತ್ತು ಅದರಲ್ಲಿ ಅಭ್ಯರ್ಥಿಯ ಹೆಸರು ಹಾಗೂ ದಿನಾಂಕ ಸ್ಪಷ್ಟವಾಗಿ ಕಾಣಿಸಬೇಕು.

ಪರೀಕ್ಷಾ ಕೇಂದ್ರ ಆಯ್ಕೆ

ಪ್ರಾಥಮಿಕ ಪರೀಕ್ಷೆಯ ಕೇಂದ್ರಗಳನ್ನು "ಮೊದಲು ಬಂದವರಿಗೆ ಆದ್ಯತೆ" ಆಧಾರದ ಮೇಲೆ ಹಂಚಲಾಗುತ್ತದೆ. ಆದ್ದರಿಂದ, ಆದ್ಯತೆಯ ನಗರದಲ್ಲಿ ಪರೀಕ್ಷಾ ಕೇಂದ್ರವನ್ನು ಪಡೆಯಲು ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries