HEALTH TIPS

ಹಿಂದೂ ಸಮಾಜೋತ್ಸವದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಸಿಪಿಐ ನಾಯಕಿ ಪುಷ್ಪಾರ್ಚನೆ; ವಿವರಣೆ ಕೋರಿದ ಜಿಲ್ಲಾ ನಾಯಕತ್ವ

ಕಾಸರಗೋಡು: ಆರ್‍ಎಸ್‍ಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಪಿಐ ನಾಯಕಿ ಸುಂದರಿ ಶೆಟ್ಟಿ ಭಾಗವಹಿಸಿ ಇದೀಗ ವಿವಾದಕ್ಕೆಡೆಯಾಗಿದೆ. ಅವರು ಮೀಂಜ ಪಂಚಾಯತಿ ಮಟ್ಟದಲ್ಲಿ ನಡೆದ ಹಿಂದೂ ಏಕತಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸುಂದರಿ ಶೆಟ್ಟಿ ಮೀಂಜ ಪಂಚಾಯತ್‍ನ ಮಾಜಿ ಅಧ್ಯಕ್ಷೆ ಮತ್ತು ಸಿಪಿಐ ಜಿಲ್ಲಾ ಪರಿಷತ್ತಿನ ಮಾಜಿ ಸದಸ್ಯೆ.

ಕಾಸರಗೋಡಿನ ಸುತ್ತಲೂ ಕೇಂದ್ರೀಕೃತವಾಗಿರುವ ವಿವಿಧ ಪಂಚಾಯತ್‍ಗಳಲ್ಲಿ ಸಂಘ ಪರಿವಾರ ಹಿಂದೂ ಏಕತಾ ಸಮ್ಮೇಳನವನ್ನು ಆಯೋಜಿಸುತ್ತಿದೆ. ಚುನಾವಣೆಗಳು ನಡೆಯಲಿರುವ ಕಾರಣ ಆರ್‍ಎಸ್‍ಎಸ್ ಹೊಸ ಅಭಿಯಾನದೊಂದಿಗೆ ಜನರನ್ನು ಏಕೀಕರಿಸಲು ಪ್ರಯತ್ನಿಸುತ್ತಿದೆ. ಸಿಪಿಐ ನಾಯಕಿ ಸುಂದರಿ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಅವರು ಮಾತನಾಡಿ ಕಾರ್ಯಕ್ರಮವನ್ನು ಸ್ವಾಗತಿಸಿ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಮಧ್ಯೆ, ಸಿಪಿಐ ನಾಯಕತ್ವ ಈ ಕ್ರಮವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಸುಂದರಿ ಶೆಟ್ಟಿ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬಹುದು. ಜಿಲ್ಲಾ ನಾಯಕತ್ವವು ಸುಂದರಿ ಶೆಟ್ಟಿ ಅವರಿಂದ ವಿವರಣೆಯನ್ನು ಕೋರಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries