HEALTH TIPS

ಎರಡು ಎಐ ಡಾಟಾ ಸೋರಿಕೆ ಪ್ರಕರಣ: ಕೋಟ್ಯಂತರ ಮಂದಿಯ ಕೆವೈಸಿ ದಾಖಲೆ ಬಹಿರಂಗ

ನವದೆಹಲಿ:ಎರಡು ಎಐ ಸಂಬಂಧಿತ ಆಯಪ್ ಗಳಿಂದ ಬೃಹತ್ ಪ್ರಮಾಣದ ದತ್ತಾಂಶಗಳು ಸೋರಿಕೆಯಾಗಿರುವುದನ್ನು ಸೈಬರ್ ಭದ್ರತಾ ತಜ್ಞರು ಪತ್ತೆ ಮಾಡಿದ್ದು, ಇದರಿಂದ ಜಾಗತಿಕವಾಗಿ ಕೋಟ್ಯಂತರ ಬಳಕೆದಾರರ ಸೂಕ್ಷ್ಮ ವೈಯಕ್ತಿಕ ಹಾಗೂ ಮಾಧ್ಯಮ ಕಡತಗಳು ಬಹಿರಂಗಗೊಂಡಿವೆ. ಸೈಬರ್ ನ್ಯೂಸ್ ಈ ಎರಡು ಪ್ರತ್ಯೇಕ ಸೋರಿಕೆಗಳನ್ನು ವರದಿ ಮಾಡಿದ್ದು, ಕೋಟ್ಯಂತರ ದಾಖಲೆಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿದೆ ಎಂದು ಭದ್ರತಾ ಸಂಶೋಧಕರು ಹೇಳಿದ್ದಾರೆ.

ಎಐ ಚಾಲಿತ ಕೆವೈಸಿ ಸಾಧನದ ಆಯಪ್ ನಲ್ಲಿ ಮೊದಲ ಸೋರಿಕೆ ವರದಿಯಾಗಿದೆ. ಡಿಜಿಟಲ್ ಗುರುತಿಸುವಿಕೆ ದೃಢೀಕರಣ ಸೇವಾ ಪೂರೈಕೆದಾರ ಕಂಪನಿ ಐಡಿಮೆರಿಟ್ ಇದನ್ನು ಬಳಸುತ್ತಿತ್ತು. ಈ ಕಂಪನಿ ಎಐ-ಚಾಲಿತ ಡಿಜಿಟಲ್ ಗುರುತಿಸುವಿಕೆ ದೃಢೀಕರಣ ಸೊಲ್ಯೂಶನ್ ಪೂರೈಕೆದಾರ ಕಂಪನಿಯಾಗಿದ್ದು, ಫಿನ್ ಟೆಕ್ ಮತ್ತು ಇತರ ಹಣಕಾಸು ಸೇವಾ ವಲಯಗಳಿಗೆ ನೈಜ-ಸಮಯದ ದೃಢೀಕರಣ ಸಾಧನಗಳನ್ನು ಒದಗಿಸುತ್ತದೆ.

"2025ರ ನವೆಂಬರ್ 11ರಂದು ದತ್ತಾಂಶ ಸೋರಿಕೆಯಾಗಿರುವುದನ್ನು ನಮ್ಮ ಸಂಶೋಧಕರು ಪತ್ತೆ ಮಾಡಿ ತಕ್ಷಣವೇ ಕಂಪನಿಯನ್ನು ಸಂಪರ್ಕಿಸಿದ್ದರು. ಇದುವರೆಗೆ ಇದನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಪುರಾವೆಗಳು ಲಭ್ಯವಾಗಿಲ್ಲ" ಎಂದು ಸಂಶೋಧಕರು ಹೇಳಿದ್ದಾರೆ. ಈ ಸೋರಿಕೆಯಲ್ಲಿ 26 ದೇಶಗಳ 100 ಕೋಟಿ ಮಂದಿಯ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳು ಬಹಿರಂಗಗೊಂಡಿವೆ, ಅಮೆರಿಕದ 203 ದಶಲಕ್ಷ ದಾಖಲೆಗಳು ಬಹಿರಂಗವಾಗಿದ್ದು, ಮೆಕ್ಸಿಕೊ (124 ದಶಲಕ್ಷ), ಫಿಲಿಫೀನ್ಸ್ (72 ದಶಲಕ್ಷ) ಮುಂದಿನ ಸ್ಥಾನಗಳಲ್ಲಿವೆ.

ಎರಡನೇ ಸೋರಿಕೆ ವಿಡಿಯೊ ಎಐ ಆರ್ಟ್ ಜನರೇಟರ್ ಅಂಡ್ ಮೇಕರ್ ಹೆಸರಿನ ಆಯಂಡ್ರಾಯ್ಡ್ ಆಯಪ್ ಗೆ ಸಂಬಂದಿಸಿದ್ದು, ಇದು ಗೂಗಲ್ ಪ್ಲೇನಲ್ಲಿ 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ ಹಾಗೂ 11000 ವಿಮರ್ಶೆಯೊಂದಿಗೆ 4.3 ರೇಟಿಂಗ್ ಹೊಂದಿದೆ. ಈ ಸೋರಿಕೆಯಲ್ಲಿ ಸುಮಾರು 15 ಲಕ್ಷ ಬಳಕೆದಾರರ ಚಿತ್ರಗಳು ಹಾಗೂ 3.85 ಲಕ್ಷ ವಿಡಿಯೊಗಳು, ಎಐ ಬಳಸಿ ಬಳಕೆದಾರರು ಸೃಷ್ಟಿಸಿದ್ದ ಲಕ್ಷಾಂತರ ಮೀಡಿಯಾ ಫೈಲ್ ಗಳು ಸೋರಿಕೆಯಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries