HEALTH TIPS

ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆ | ಸಂಸತ್ತಿಗೆ ಏಳು ಮಹಿಳಾ ಸಂಸದರ ಆಯ್ಕೆ

ಢಾಕಾ: ಬಾಂಗ್ಲಾದೇಶದಲ್ಲಿ ನಡೆದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ಸಂಸತ್ತಿಗೆ ಏಳು ಮಂದಿ ಮಹಿಳಾ ಸಂಸದರು ಆಯ್ಕೆಯಾಗಿದ್ದು, ಈ ಪೈಕಿ ಬಹುತೇಕರು ಬಿಎನ್‌ಪಿ ಪಕ್ಷಕ್ಕೆ ಸೇರಿದ್ದಾರೆ ಎಂದು ಶುಕ್ರವಾರ ಮಾಧ್ಯಮವೊಂದು ವರದಿ ಮಾಡಿದೆ.

ನಿಶ್ಚಿತ ಬಹುಮತ ಪಡೆದು ಸರ್ಕಾರ ರಚಿಸಲು ಸಜ್ಜಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಆರು ಮಂದಿ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ ಎಂದು ಅನಧಿಕೃತ ಫಲಿತಾಂಶಗಳನ್ನು ಉಲ್ಲೇಖಿಸಿ The Dhaka Tribune ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಾಣಿಕ್‌ಗಂಜ್-3 ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಫ್ರೋಜಾ ಖಾನ್ ರೀತು, ಝಾಲೋಕಾಠಿ-2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಸ್ರತ್ ಸುಲ್ತಾನಾ ಎಲೆನ್ ಭುಟ್ಟೊ, ಸಿಲ್ಹೆಟ್-2 ಕ್ಷೇತ್ರದಿಂದ ಸ್ಪರ್ಧಿಸಿದ್ದ ತಹ್ಸೀನಾ ರುಶ್ದೀಶರ್ ಲೂನಾ, ಫರೀದ್‌ಪುರ್-2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಮಾ ಒಬೈದ್, ಫರೀದ್‌ಪುರ್-3 ಕ್ಷೇತ್ರದಿಂದ ಸ್ಪರ್ಧಿಸಿದ್ದ ಯೂಸುಫ್ ಕಮಾಲ್ ಹಾಗೂ ನಟೋರ್-1 ಕ್ಷೇತ್ರದಿಂದ ಸ್ಪರ್ಧಿಸಿದ್ದ ಫರ್ಝಾನಾ ಶರ್ಮೀನ್ ಪುತುಲ್ ಆಯ್ಕೆಯಾಗಿದ್ದಾರೆ.

ಇದರೊಂದಿಗೆ, ಬ್ರಹ್ಮಣಬಾರಿಯಾ-2 ಕ್ಷೇತ್ರದಿಂದ ಬಿಎನ್‌ಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಬ್ಯಾರಿಸ್ಟರ್ ರುಮೀನ್ ಫರ್ಹಾನಾ ಗೆಲುವು ಸಾಧಿಸಿದ್ದಾರೆ.

ದೇಶಾದ್ಯಂತ ನಡೆದ ಮತದಾನ ಹಾಗೂ ಮತ ಎಣಿಕೆ ಮುಕ್ತಾಯದ ನಂತರ ಪ್ರಕಟವಾಗಿರುವ ಅನಧಿಕೃತ ಪಟ್ಟಿಯನ್ನು ಆಧರಿಸಿ ಈ ಫಲಿತಾಂಶಗಳನ್ನು ನೀಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಬಾಂಗ್ಲಾದೇಶ ಸಂಸತ್ತಿನ 300 ಕ್ಷೇತ್ರಗಳ ಪೈಕಿ ಬಿಎನ್‌ಪಿ ಕೇವಲ 10 ಕ್ಷೇತ್ರಗಳಲ್ಲಿ ಮಾತ್ರ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಬಿಎನ್‌ಪಿಯ ಆರು ಮಂದಿ ಅಭ್ಯರ್ಥಿಗಳು ಹಾಗೂ ಬಿಎನ್‌ಪಿಯಿಂದ ಉಚ್ಚಾಟಿತರಾಗಿದ್ದ ಓರ್ವ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ ಎಂದು ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries