ಕಾಸರಗೊಡು: ಲೂಡೋ ಕಾಯಿನ್ ಗಂಟಲಲ್ಲಿ ಸಿಲುಕಿ ಎಂಟರ ಹರೆಯದ ಬಾಲಕಿ ಮೃತಪಟ್ಟ ಘಟನೆ ಮಧೂರು ಸನಿಹದ ಉಳಿಯತ್ತಡ್ಕದಲ್ಲಿ ನಡೆದಿದೆ. ಉಳಿಯತ್ತಡ್ಕ ನಿವಸಿ ರಾಜೇಶ್ ಗಟ್ಟಿ-ರಾಜೇಶ್ವರೀ ದಂಪತಿ ಪುತ್ರಿ ತನುಷ್ಕಾ(8)ಮೃಥಪಟ್ಟ ಬಾಲಕಿ.
ಸಹೋದರನ ಜತೆ ಆಟವಡುವ ಮಧ್ಯೆ ಕಾಯಿನ್ ಬಾಯಿಯೊಳಗೆ ಹಾಕಿಕೊಂಡಿದ್ದು, ಏಕಾಏಕಿ ಗಂಟಲಲ್ಲಿ ಸಿಲುಕಿ ಉಸಿರಾಟ ಸಮಸ್ಯೆ ಎದುರಾಗಿದೆ. ತಕ್ಷಣ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ತಾಯಿ ರಾಜೇಶ್ವರೀ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ತನುಷ್ಕಾ ತೊಕ್ಕೊಟ್ಟುವಿನ ಖಾಸಗಿ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.


